ಧಾರವಾಡ: ಧಾರವಾಡದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅಕ್ಕಮಹಾದೇವಿ ಅನುಭವ ಪೀಠದ ಬಸವಪ್ರಕಾಶ ಸ್ವಾಮೀಜಿಗಳು, ಹೆಣ್ಣು ಮಕ್ಕಳು ಮಹಿಳೆಯರು ತುಂಡು ಉಡುಗೆ (ಶಾರ್ಟ್ ಕಟ್ಸ್) ತೊಡುವುದರಿಂದ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತಿವೆ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ರಾತ್ರಿ 12 ಗಂಟೆಯ ನಂತರ ಮಹಿಳೆಯರು ಓಡಾಡಬಾರದು. ಇದರಿಂದ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಮೈತುಂಬ ಬಟ್ಟೆ ಧರಿಸಿ ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಹೊರಟರೆ ಸಮಾಜ ಒಳ್ಳೆಯ ದಾರಿಯಲ್ಲಿ ನಡೆಯುತ್ತದೆ ಎನ್ನುವ ಉದ್ದೇಶದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಯುವತಿಯರು ಮಹಿಳೆಯರು ತುಂಡು ಉಡುಗೆ (ಶಾರ್ಟ್ ಕಟ್ಸ್) ಹಾಕಿಕೊಂಡು ಓಡಾಡಬಾರದು. ಹೆಣ್ಣು ಮಕ್ಕಳು ಮಹಿಳೆಯರು ತುಂಡು ಉಡುಗೆ (ಶಾರ್ಟ್ ಕಟ್ಸ್) ತೊಡುವುದರಿಂದ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತವೆ ಎಂದು ಹೇಳುತಾ, ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಪಾಲನೆ ಮಾಡಬೇಕು ಎಂದು ಹೇಳಿದರು.