ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅನಾರೋಗ್ಯ ಕಾರಣ ಪ್ರಕೃತಿ ಚಿಕಿತ್ಸೆ ಪಡೆಯಲು ಉಡುಪಿಯ ಬೀಚ್ ರೆಸಾರ್ಟ್ ಗೆ ತೆರಳಿದ್ದು, ಕೆಲ ಕಿಡಗೇಡಿಗಳು ಇದನ್ನೇ ಸಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಬಳಿಸಿಕೊಂಡ ತೇಜೋವಧೆ ನಡೆಸುತ್ತಿದ ಇಬ್ಬರನ್ನು ಬೆಂಗಳೂರು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ಚೌಕಿದಾರ್ ಅಜಿತ್ ಶೆಟ್ಟಿ, ಯುಕೆಸುದ್ದಿ ಡಾಟ್ ಇನ್ ಎಂಬ ವೆಬ್ ಸೈಟ್ ಅವಹೇಳನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎಚ್ ಬಿ ದಿನೇಶ್ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು ಅಜಿತ್ ಶೆಟ್ಟಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.