ಕಲಬುರಗಿ: ಆಫಜಲಪೂರ ತಾಲೂಕಿನ ಸರಕಾರಿ ಪ್ರೌಢ ಶಾಲೆಯ ಬಾಲಕ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ ಪಡೆದು ಜಿಲ್ಲೆಗೆ ಎರಡನೆ ರ್ಯಾಂಕ್ ಬಂದಿರುವ ಮತೀನ್ ಜಮಾದಾರಗೆ ಎಸ್.ಡಿ.ಪಿ.ಐ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ಮತೀನ್ ಜಮಾದರ ಅವರ ತಂದೆ ನಬಿ ಸಾಬ ಜಮಾದಾರ್ ಕಟ್ಟಡ ಕಾರ್ಮಿಕ ನಾಗಿ ಜೀವನ ಸಾಗಿಸುತ್ತಿದ್ದು. ಮತೀನ್ ಗೆ ಐಎಎಸ್ ಅಧಿಕಾರಿ ಆಗುವ ಕನಸು ಹೊಂದಿದಾನೆ.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಪಕ್ಷದ ಅಲೀಮೋದ್ದಿನ ಮಾತನಾಡಿ, ಹಿಂದುಳಿದ ಕಟ್ಟಡ ಕಾರ್ಮಿಕನ ಮಗ ಜಿಲ್ಲೆಗೆ ಕೀರ್ತಿದಂದಿರವುದು ಬಗ್ಗೆ ಹರ್ಷವ್ಯಕ್ತ ಪಡಿಸಿ, ಎಸ್.ಡಿ.ಪಿ.ಐ ಪಕ್ಷ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಹಿಸುವ ಮೂಲಕ ಅವರ ಏಳಿಗೆ ಶ್ರಮಿಸುತ್ತದೆ ಎಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಗಲ್ಫ್ ಇಂಡಿಯನ್ ಸೋಷಿಯಲ್ ಫೋರಂ ಹಾಗೂ ಇಂಡಿಯನ್ ಫರಟೇನಿಟಿ ಫೋರಂನ ಮುಖ್ಯಸ್ಥರು ಮತೀನ್ ಜಮಾದಾರ್ ಅವರ ಮುಂದಿನ ವಿದ್ಯಾಭ್ಯಸದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳಲು ಮುಂದಾಗಿದ್ದಾರೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ಮೊಹಸೀನ್, ಕೆ.ಬಿ.ಎನ್ ಪತ್ರಿಕೆಯ ಸಂಪಾದಕ ಅಜೀಜುಲ್ಲಾ ಸರಮಸ್ತ ಹಾಗೂ ಅಬ್ದುಲ್ ರಹೀಂ ಪಟೇಲ್ ಸೇರಿದಂತೆ ಮುಂತಾದವರು ಇದ್ದರು.