ಬೌದ್ಧರು ಕಂಡಂತೆ; ಹೀಗಿದ್ದರು ಮಹಾತ್ಮ ಗಾಂಧೀಜಿ

0
138

ಪುಸ್ತಕ: ಅಮೋಘ ನಾಯಕ ಗಾಂಧಿ

ಲೇಖಕ: ಪಾಸ್ಕಲ್ ಆಲೆನ್

Contact Your\'s Advertisement; 9902492681

‘ ಜಪಾನಿನ ದಸೈಕೂ ಇಕೇಡಾ ಅವರು ಜೊಸಾಯಿ ಟೋಡಾ ಅವರ ಉತ್ತರಾಧಿಕಾರಿ.  ಯೌವನದಲ್ಲಿಯೇ ಯುದ್ಧದ ಭೀಕರತೆಯನ್ನು ಅನುಭವಿಸಿದ್ದರು. ಸಾಮಾಜಿಕ ಸೌಹಾರ್ದ ಮತ್ತು ಅಂತರಾಷ್ಟ್ರೀಯ ಶಾಂತಿಯನ್ನು ಸ್ಥಾಪಿಸಲು ತಮ್ಮ ಬದುಕನ್ನೇ ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. 1962ರಲ್ಲಿ ಸೊಕಾ ಗಕಾಯಿ ಸಂಘದ ಅಧ್ಯಕ್ಷರಾದಾಗ ದಸೈಕೂಗೆ 32 ವರ್ಷ. ಅವರ ಶಕ್ತಿಯುತ ನಾಯಕತ್ವದಲ್ಲಿ ಸಂಘಟನೆ ಜಗತ್ತಿಗೇ ವ್ಯಾಪಿಸಿತು. 1975ರಲ್ಲಿ ಅವರು ಸೊಕಾ ಗಕಾಯಿ ಇಂಟರ್ ನ್ಯಾಷನಲ್ ಅನ್ನು ಸ್ಥಾಪಿಸಿದರು. ಇವತ್ತು ಅದೊಂದು ವಿಶ್ವವ್ಯಾಪಿ‌ ಸಂಘಟನೆಯಾಗಿದೆ. 82 ಅಂಗ ಸಂಸ್ಥೆಗಳನ್ನು ಹೊಂದಿ 192 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ದಸೈಕಾ ಇಕೆಡಾ ಅವರಿಗೆ ಗಾಂಧೀಜಿಯವರ ಬಗ್ಗೆ ಇದ್ದ ಉನ್ನತ ಗೌರವ ಅವರ “ಗಾಂಧೀವಾದ ಮತ್ತು ಇಪ್ಪತ್ತೊಂದನೇ ಶತಮಾನ” ಎಂಬ ಲೇಖನದಲ್ಲಿ ಸೂಚಿತವಾಗಿದೆ. “ಜರ್ನಲ್ ಆಫ್ ಪೀಸ್ ಆ್ಯಂಡ್ ಗಾಂಧೀಯನ್ ಸ್ಟಡೀಸ್” ಎಂಬ ಪತ್ರಿಕೆಯಲ್ಲಿ (1997 ಎಪ್ರಿಲ್-ಸಪ್ಟಂಬರ್) ಪ್ರಕಟಗೊಂಡಿದೆ. ಅದರಲ್ಲಿ ಅವರು ಪ್ರತಿಪಾದಿಸಿದ್ದು.

“ಪರಸ್ಪರ ಮುಗ್ಧಗೊಳಿಸುವುದಾಗಿಯೂ ವ್ಯಕ್ತಿ ಹಾಗೂ ಜಗತ್ತನ್ನು ಅರಳಿಸುವಂತೆ ಹೃದಯಾಂತರಾಳದಲ್ಲಿರುವ ಅಜ್ಞಾನದ ಶೋಧನೆಯು ಬೌದ್ಧಧರ್ಮದ ಕೊಡುಗೆ. ಆ ಒಳ ಕತ್ತಲನ್ನು ಗೆಲ್ಲಲು ಮಹಾತ್ಮ ಗಾಂಧಿ ಅವರ ಶ್ರಮವನ್ನು ಲೆಕ್ಕಿಸದೆ ಕೆಲಸ ಮಾಡಿದರು. ತಮ್ಮ ಅಹಿಂಸಾತ್ಮಕ ಪ್ರತಿರೋಧವನ್ನು ಸತ್ಯಾಗ್ರಹ ಎಂದು ಗಾಂಧಿ ಅವರು ಕರೆದಿದ್ದು ವಿಶಿಷ್ಟ ಆಸಕ್ತಿಯ ವಿಷಯ. ಅವರದು ಸಾಮಾಜಿಕ ಕಾರ್ಯಕ್ರಮವೇ ಆದರೂ, ಅದೇ ವೇಳೆಗೆ ಅದು ಬೌದ್ಧವೂ ಅಜ್ಞಾನ ಎಂದು ಕರೆದ ನಕಾರಾತ್ಮಕ ಶಕ್ತಿಗಳನ್ನು ಗೆಲ್ಲಲು ಮಾಡಿದ ತಾತ್ವಿಕ ಹೋರಾಟವೂ ಆಗಿತ್ತು. ಗಾಂಧೀಜಿಯವರ ಜೀವನದಲ್ಲಿ ಕಾರ್ಯ ಮತ್ತು ತತ್ವಗಳ ನಡುವೆ, ಆತ್ಮ ಮತ್ತು ದೇಹಗಳ ನಡುವೆ ಪರಿಪೂರ್ಣ ಏಕತ್ವವನ್ನು ನಾವು ಕಾಣಬಹುದು” ಎಂದು ಪ್ರತಿಪಾದಿಸಿದರು.

ಚರಕಾ & ಬ್ರಿಟಿಷ್ ಆರ್ಥಿಕತೆ..

‘ ಭಾರತದ ರಾಷ್ಟ್ರೀಯ ಚಳವಳಿಯ ಮುಖ್ಯ ಅಸ್ತ್ರವಾಗಿ ಚರಖಾವನ್ನು ಆರಿಸಿಕೊಂಡಿದ್ದು ಮಹಾತ್ಮಾ ಗಾಂಧಿಯವರ ವ್ಯೂಹ ರಚನಾ ಕೌಶಲಕ್ಕೆ ಉತ್ತಮ ಉದಾಹರಣೆ. ಅಲ್ಲಿಯವರೆಗೆ ನೂಲುವುದು ಒಂದು ಮನೆಗೆಲಸವಾಗಿತ್ತು. ಅದರಲ್ಲಿ ತೊಡಗಿದ್ದವರು ಎಲ್ಲೊ ಕೆಲವು ಮಂದಿ. ತಮ್ಮ ಆತ್ಮಕಥನದಲ್ಲಿ ಗಾಂಧಿ  ಅವರು ಹೇಳುತ್ತಾರೆ.

“ಭಾರತದ ದಿವಾಳಿತನಕ್ಕೆ ಚರಕಾ ಸಿದ್ಧೌಷದ ಎಂದು ನಾನು 1908 ರಲ್ಲಿ ಹಿಂದ್ ಸ್ವರಾಜ್ ನಲ್ಲಿ ವಿವರಿಸಿದಾಗ, ನಾನು ಕೈಮಗ್ಗವನ್ನಾಗಲಿ, ಚರಖಾವನ್ನಾಗಲಿ ನೋಡಿಯೇ ಇರಲಿಲ್ಲ. 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸು ಬಂದಾಗ ಕೂಡಾ ನಾನು ಚರಕಾವನ್ನು ನೋಡಿರಲಿಲ್ಲ ಎಂದು”.

“ಚರಕಾವನ್ನು ಭಾರತದ ಆರ್ಥಿಕ ಸಂಕಟಕ್ಕೆ ಪರಿಹಾರವೆಂದು  ಗಾಂಧಿ ಅವರು ಪರಿಕಲ್ಪನೆ ಮಾಡಿದ್ದರಿಂದ ಮತ್ತು ಅದರ ಬಳಕೆ ರಾಷ್ಟ್ರೀಯ ಚಳವಳಿಯಲ್ಲಿ ಪ್ರತಿಯೊಬ್ಬನಿಗೂ ಕಡ್ಡಾಯ ಎಂದು ಮಾಡಿದ್ದರಿಂದ, ಅವರು ಭಾರತದ ಮೇಲೆ ಬ್ರಿಟಿಷರಿಗಿದ್ದ ಆರ್ಥಿಕ ಬಿಗಿ ಹಿಡಿತವನ್ನು ಸಡಿಲಗೊಳಿಸಿಬಿಟ್ಟರು. ನೂಲುವ ಕ್ರಿಯೆಯಲ್ಲಿ ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ಸಮಾನತೆ ಉಂಟುಮಾಡಿದರು.

ಇನ್ನೂ ಮುಖ್ಯವಾಗಿ ಅವರಿಗೂ ಮತ್ತು ಅಸ್ಪೃಶ್ಯನಿಗೂ ನಡುವೆ ಸಮಾನತೆ ತಂದರು. ಕೈನೂಲಿನ ಕೈಮಗ್ಗದ ಬಟ್ಟೆ ಹಾಗೂ ಟೋಪಿಗಳು ಭಾರತದ ರಾಷ್ಟ್ರೀಯವಾದಿಗಳಿಗೆ ಸಮವಸ್ತ್ರಗಳಾದವು. ವಿದೇಶಿ ವಸ್ತ್ರಗಳ ಬೆಂಕಿಯ ಪಾಲಾದವು. ಭಾರತದ ನೇಯ್ಗೆ ಉದ್ಯಮಕ್ಕೆ ಮರುಹುಟ್ಟು ಆಯಿತು. ಭಾರತದಲ್ಲಿ ಬ್ರಿಟಿಷ್ ವಸ್ತ್ರಗಳ ಮಾರಾಟ ಸಾಕಷ್ಟು ಇಳಿಯಿತು.

ಭಾರತಕ್ಕೆ ಬ್ರಿಟಿಷ್ ವಸ್ತ್ರಗಳ ರಫ್ತುಗಳ ಮಹಾಕುಸಿತದಲ್ಲಿ ಶೇ.25 ರಷ್ಟು ಇಳಿದುಹೋದರೆ, “ಭಾರತದ ರಾಷ್ಟ್ರೀಯ ಕಾಂಗ್ರೆಸ್ ನಡೆಸಿದ ಬಹಿಷ್ಕಾರದ ಪರಿಣಾಮವಾಗಿ ಶೇ 15 ರಷ್ಟು ಇಳಿದುಹೋಯಿತು” ಎಂದು ಭಾರತದ ಕಾರ್ಯದರ್ಶಿಗಳೇ ಕಾಮನ್ಸ್ ಸಭೆಯಲ್ಲಿ ಒಪ್ಪಿಕೊಂಡರು.

ಡಿಸೆಂಬರ್ 1930 ರಿಂದ ಎಪ್ರಿಲ್ 1931ರ ಅವಧಿಯಲ್ಲಿ ಈ ಬಹಿಷ್ಕಾರ ತುತ್ತ ತುದಿಯಲ್ಲಿದಾಗ ಆ ಇಳಿತ ಶೇ.84 ಕ್ಕೆ ತಲುಪಿತು.

ಗಾಂಧಿಯವರ ಚರಖಾ ಚಮತ್ಕಾರವನ್ನು ಲೂಯಿಸ್ ಫಿಷರ್

ಈ ರೀತಿ ಪ್ರಶಂಸಿಸುತ್ತಾನೆ: “ಗಾಂಧಿಯವರು ನಗರ-ಊರುಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು.

ಬಡವ-ಬಲ್ಲಿದರನ್ನು ಒಂದುಗೂಡಿಸಲು ಪ್ರಯತ್ನಿಸಿದರು. ಕೆಳಗೆ ಬಿದ್ದವನಿಗೆ ಸಹಾಯ ಮಾಡಲು ಆತನನ್ನು ಅರ್ಥಮಾಡಿಕೊಳ್ಳಬೇಕು. ಅರ್ಥಮಾಡಿಕೊಳ್ಳಬೇಕಾದರೆ, ಆತ ಮಾಡುವ ಕೆಲಸವನ್ನೇ ನಾವೂ ಮಾಡಬೇಕು. ನೂಲುವುದು ಪ್ರೇಮದ ಕೆಲಸವೇ, ಸಂವಹನದ ಇನ್ನೊಂದು ಕಾಲುವೆ.

ಅದು ಸಂಘಟನೆಯ ವಿಧಾನವೂ ಹೌದು, ಸಂಘಟಿತವಾದ ಯಾವುದೇ ಒಂದು ಜಿಲ್ಲೆಯೂ ಕಷ್ಟಾನುಭವಕ್ಕೂ ತರಬೇತುಗೊಂಡಲ್ಲಿ,  ಅದು ಸವಿನಯ ಶಾಸನಭಂಗಕ್ಕೆ ಸಿದ್ಧವಾದಂತೆಯೇ” ಎಂದರು.

(ಕೃಪೆ: Ravichandr jangannavar) ಜಗತ್ತಿನ ಎಲ್ಲ ಕ್ಷೇತ್ರದ ನಾಯಕರು ಮಹಾತ್ಮನ ಬಗ್ಗೆ ಹೇಳಿ ಮಾತಾಡಿದ ವಿಷಯಗಳು ಇದರಲ್ಲಿ ಪುಸ್ತಕದಲ್ಲಿ ಕ್ರೋಢೀಕರಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here