ಬಿಸಿಲಿನ ರಕ್ಷಣೆಗಾಗಿ ಸಿಗ್ನಲ್ ಗಳಲ್ಲಿ ಹಸಿರು ಹೊದಿಕೆ ಅಳವಡಿಸಲು ಮನವಿ

0
128

ಕಲಬುರಗಿ: ಬಿಸಿಲು ನಗರಿಯೆಂದೇ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಕಡು ಬಿಸಿಲಿನಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಸಮಯ ಕಳೆಯುವುದ ಕಷ್ಟ ಇವಿದ್ದು, ಸಿಗ್ನಲ್ ಗಳಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಹಸಿರು ಹೊದಿಕೆ ಅಳವಡಿಸಬೇಕೆಂದು ಎಐಡಿಎಸ್ಒ ಸಂಘಟನೆಯ ನಗರಾಧ್ಯಕ್ಷ ಭೀಮಾಶಂಕರ ಪಾಣೇಗಾಂವ ಆಗ್ರಹಿಸಿದ್ದಾರೆ.

ನಗರದಲ್ಲಿ ಜನದಟ್ಟನೆಯ ಪ್ರದೇಶವಾಗಿದ ನಗರ ಪ್ರತಿ ದಿನ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತವೆ. ಬೇಸಿಗೆಯ ಕಡು ಬಿಸಿಲಿನಲ್ಲಿ ಟ್ರಾಫಿಕ್ ಸಿಗ್ನಲನಲ್ಲಿ 2-3 ನಿಮಿಷ ನಿಂತು ಹೊಗುವುದು ಅತ್ಯಂತ ಕಷ್ಟರವಾಗಿದೆ. ಬಿಸಿಲಿನ ಶಾಖ ಸೂರ್ಯನ ಪ್ರಖರತೆ ಇನ್ನು ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಂಭವ ಕೂಡಾ ಇದೆ. ಇಂತಹ ಪರಿಸ್ಥಿಯಲ್ಲಿ ಮಹಾನಗರ ಪಾಲಿಕೆ ನಗರದ ಜನತೆಗೆ ಪ್ರಮುಖ ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಡ ಕಾರುವ ರಣ ಬಿಸಿಲಿನ ರಕ್ಷಣೆ ಪಡೆಯಲು ವಾಹನಗಳು ನಿಲ್ಲುವ ಸಿಗ್ನಲ್ ಸ್ಥಳದ ರಸ್ತೆಯ ಮೇಲ್ಬಾಗದಲ್ಲಿ ಹಸಿರು ಹೊದಿಕೆ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಈ ಯೋಜನೆ ಈಗಾಗಲೇ ಆಂಧ್ರದ ಕರ್ನೂಲ್ ಹಾಗೂ ಕರ್ನಾಟಕದ ವಿಜಯಪುರ, ನಗರದಲ್ಲಿ ಹಸಿರು ಹೊದಿಕೆ ವ್ಯವಸ್ಥೆ ಮಾಡಿ ವಾಹನ ಚಾಲಕರಿಗೆ ನೆರಳಿನ ಅನುಕೂಲ ಮಾಡಿಕೊಟ್ಟಿದ್ದಾರೆ. ಯೋಜನೆಗೆ ಸ್ಥಳೀಯ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅದೇ ಮಾದರಿಯಲ್ಲಿ ಕಲಬುರಗಿ ನಗರದಲ್ಲಿ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here