ಮಂಡ್ಯ; ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ

0
105

ವರದಿ: ಮೋಹನ ಮದ್ದೂರ

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಟಿಬಿ ಬಡಾವಣೆಯ ದಕ್ಷಿಣ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Contact Your\'s Advertisement; 9902492681

ಕಸಾಪ ಮಾಜಿ ಅಧ್ಯಕ್ಷ ಸಾಹಿತಿ ಸುಜನಾ ಅವರ ಸಹೋದರ ಡಾ.ಶ್ರೀನಿವಾಸ ಶೆಟ್ಟಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಮನೆ ಹಾಗೂ ಮನದಲ್ಲಿ ಕನ್ನಡದ ಕಿಚ್ಚನ್ನು ಹಚ್ಚುವ, ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿಸುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದೆ. ಕನ್ನಡ ನಾಡು ನುಡಿ, ನೆಲ-ಜಲದ ಉಳಿವಿಗಾಗಿ ಹೋರಾಡಿದ ಮಹನೀಯರ ಆದರ್ಶಗಳು ಹಾಗೂ ಬಲಿದಾನವನ್ನು ಸ್ಮರಿಸಿ ನಮ್ಮ ಮುಂದಿನ ತಲೆಮಾರಿಗೆ ತಿಳಿಸಿಕೊಡಲು ಇಂತಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಶ್ರೀನಿವಾಸ ಶೆಟ್ಟಿ ಹೇಳಿದರು.

ಕಸಾಪ ಸಂಸ್ಥಾಪನಾ ದಿನಾಚರಣೆ ಕುರಿತು ಕನ್ನಡ ಅಧ್ಯಾಪಕ ಚಾ.ಶಿ.ಜಯಕುಮಾರ್ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕನ್ನಡದ ಪರಿಚಾರಕರಾದ ಕೆ.ಜೆ.ನಾಗರಾಜು ಅವರನ್ನು ಸನ್ಮಾನಿಸಿ  ಗೌರವಿಸಲಾಯಿತು.. ಶಿಕ್ಷಣ ಇಲಾಖಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಗೌರವಾಧ್ಯಕ್ಷ ಕೃಷ್ಣನಾಯಕ್, ನಿರ್ದೇಶಕರಾದ ನಾಗೇಶ್, ಶಿವಕುಮಾರ್, ಕಸಾಪ ನಗರ ಘಟಕದ ಅಧ್ಯಕ್ಷ ಪಿಕೆಜಿ ಮಹೇಶ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ವಸಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here