- ಸಾಜಿದ್ ಅಲಿ ಕಲಬುರಗಿ
ಬೆಂಗಳೂರು: ಉತ್ತರ ತಾಲೂಕಿನ ಚಲ್ಲಹಳ್ಳಿಯ ಗೆಳೆಯ ಬಳಗ, ಗ್ರಾಮ ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಸುಮಾರು 30-35 ವರ್ಷಗಳ ಹಿಂದೆಯೇ ನಶಿಸಿ ಹೋಗಿದ್ದ (ಕಾಣೆಯಾದ) ಕೆರೆಗೆ ಹುಡುಕಿ ಮರು ಜೀವ ನೀಡುವ ಮೂಲಕ ಸರ್ವಾಜನಿರಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಚಲ್ಲಹಳ್ಳಿ ಸರ್ವೆ ನಂ. 105 ಹತ್ತಿದ ಪುಟ್ಟ ಕೆರೆವೊಂದು ಗ್ರಾಮಸ್ಥರ ಬೇಜವಾಬ್ದಾರಿಯಿಂದ ಒತ್ತುವರಿಯಾಗಿ, ಕಾಣೆಯಾಗಿತ್ತು. ಈ ಕೆರೆಯನ್ನು ಗ್ರಾಮದ ಕೆಲ ಉತ್ಸಾಹಿ ಯುವಕರು ಕಾಣೆಯಾದ ಕೆರೆಯನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದ್ದು, ಯುವಜನರು ಗ್ರಾಮಸ್ಥರಲ್ಲಿ ನೀರಿನ ಮತ್ತು ಕೆರೆಯ ಅವಶ್ಯಕತೆ ಬಗ್ಗೆ ತಿಳಿಸಿ ಒತ್ತುವರಿಯಾದ ಕೆರೆಯನ್ನು ತೆರವುಗೊಳಿಸಲಿ,ಗ್ರಾಮಸ್ಥರನ್ನು ಪ್ರೇರೇಪಿಸಿ, ಕಾಣೆಯಾದ ಕೆರೆಗೆ ಮರು ಜೀವ ತುಂಬಲು ಮುಂದಾಗಿದ್ದಾರೆ.
ಕೆರೆಯ ಹಿನ್ನೆಲೆ: ಚಲ್ಲಹಳ್ಳಿಯ ಹಳ್ಳಿಯ ಹೊರ ಭಾಗದಲ್ಲಿರುವ ಈ ಕೆರೆಯಲ್ಲಿ ಊರಿನ ಜನ 30-35 ವರ್ಷಗಳ ಹಿಂದೆ ಈ ಕೆರೆಯಲ್ಲಿ ಊರಿನ ಜನ ತಮ್ಮ ದನ ಕರುಗಳನ್ನು ನೀರು ಕುಡಿಸಲು ಮತ್ತು ದನಗಳಿಗೆ ತೊಳೆಯಲು ಸೇರಿದಂತೆ ಮುಂತಾದ ರೀತಿಯಲ್ಲಿ ಬಳಸುತ್ತಿದ್ದರು, ಆದರೆ ಕೆಲವು ವರ್ಷಗಳ ಹಿಂದಿನಿಂದ ಇಲ್ಲಿ ನೀರು ಇರದ ಕಾರಣ ಗ್ರಾಮದ ಜನರು ಆಸಕ್ತಿ ತೋರಿಲ್ಲ, ಕೆರೆ ಕಡೆಗೆ ಗಮನವೂ ಹರಿಸಿಲ್ಲ. ಈಗ ನೀರಿನ ಕೊರತೆ, ನೀರಿನ ಅಗತ್ಯ ಹೆಚ್ಚಾದ ಪರಿಣಾಮ ಗ್ರಾಮದ ಕೆಲ ಉತ್ಸಾಹಿ ಯುವಜನರು ಈ ಕೆರೆ ಕಡೆಗೆ ಹೋಗಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದಾಗ ಸುಮಾರು ಆರು ಎಕರೆ ಜಾಗ ಒತ್ತುವರಿಯಾಗಿ ಸುತ್ತಲಿನ ಜಮೀನಿನ ಮಾಲೀಕರು ಆಕ್ರಮವಾಗಿ ಹೊಲ, ಗದೆ ನಿರ್ಮಿಸಿಕೊಂಡಿದ್ದರು.
ಚಲ್ಲಹಳ್ಳಿ ಯುಜನರು ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು ಸೇರಿ ಒತ್ತುವಾರಿಯಾದ ಕೆರೆಯನ್ನು ತೆರವುಗೊಳಿಸಲು ತಹಶೀಲ್ ಕಚೇರಿಗೆ ಭೇಟಿ ನೀಡಿ ಈ ಕುರಿತು ವಿಷಯ ತಿಳಿಸಿದ್ದಾಗ, ಭೂ ಮಾಪನ ಇಲಾಖೆಗೆ ಸರ್ವೆ ನಡೆಸಿದ ಪರಿಣಾಮ ಒತ್ತುವಾರಿಗಾಗಿದ್ದು ಬೆಳಕಿಗೆ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆಕ್ರಮವಾಗಿ ಒತ್ತುವರಿ ಮಾಡಿಕೊಂಡ ಭೂಮಿಯನ್ನು ತೆರವುಗೊಳಿಸಲಾಗುತ್ತಿದೆ ಎಂದು ಹರ್ಷವ್ಯಕ್ತ ಪಡಿಸಿದ್ದರು.
ತೆರೆವುಗೊಳಿಸಿದ ಕೆರೆಗೆ ಗ್ರಾಮಸ್ಥರು ಮತ್ತು ದಾನಿಗಳ ಸಹಾಯದಿಂದ ಹೊಸ ಕೆರೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಸ್ಥಳಕ್ಕೆ ಕುಣಿಗಲ್ ತಾಲೂಕು ಅರೇ ಶಂಕರ ಮಠದ ಶ್ರೀ ಚೈತನ್ಯ ಸ್ವಾಮಿಗಳು ಮತ್ತು ಅರ್ಕಾವತಿ ಪುನಶ್ಚೇತನ ಹೂರಾಟಗಾರರಾದ ಜನಾರ್ದನ ಕೆಸರಗದ್ದೆ ರವರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಗ್ರಾಮಸ್ಥರಿಗೆ ನೈತಿಕ ಬೆಂಬಲ ನೀಡಿದರು. ಮಣ್ಣು ಹೂಳು ಎತ್ತಿ ಮತ್ತೆ ಕೆರೆಗೆ ಜೀವ ತುಂಬಲಾಗುತ್ತಿದ್ದು, ಒತ್ತುವರಿಯಾದ ಕೆರೆಯ ಪುನರುಜ್ಜೀವನಕ್ಕಾಗಿ ಮುಂದಾಗಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನೆಲ, ಜಲ ನಮ್ಮ ನಂಪತ್ತು ಈ ಸಂಪತ್ತುನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಲ್ಲಹಳ್ಳಿಯ ಗ್ರಾಮಸ್ಥರ ಈ ಪ್ರಯತ್ನದ ಮೂಲಕ ತಿಳಿಸಿದ್ದಾರೆ.
ಈ ಸಮಸ್ಯೆ ಬಹುತೇಕ ಗ್ರಾಮ, ನಗರ ಪ್ರದೇಶದಲ್ಲಿ ಇದ್ದು, ಚಲ್ಲಹಳ್ಳಿ ಗ್ರಾಮಸ್ಥರ ರೀತಿ ಕೆರೆ ಸಂರಕ್ಷಣೆಗೆ ಮುಂದಾಗುವ ಮೂಲಕ ಕನ್ನಡ ನಾಡಿನ ನೆಲ, ಜಲ ರಕ್ಷಣೆಗೆ ಮುಂದಾಗಬೇಕೆಂದು ಇ-ಮೀಡಿಯಾ ಲೈನ್ ಆಶಿಸುತ್ತದೆ.