ಏ. 3 ರಂದು ರಾಜ್ಯಮಟ್ಟದ 19ನೇ ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನ  

0
38

ಕಲಬುರಗಿ: ೨೦೧೯ ರಲ್ಲಿ  ಶಿವಮೊಗ್ಗದಲ್ಲಿ ನಡೆದ ೧೮ನೇಯ ರಾಜ್ಯಮಟ್ಟದ  ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಅಂದರೆ, ೧೯ನೇಯ ಸಮ್ಮೇಳನ ೨೦೨೦ ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನೇತೃತ್ವದಲ್ಲಿ ಆಯೋಜಿಸಲು ತಿರ್ಮಾನಿಸಲಾಗಿದೆ ಎಂದು ಮುಖ್ಯಸ್ಥ ಜಿ. ಶ್ರೀರಾಮುಲು ತಿಳಿಸಿದ್ದಾರೆ.

ಮಾರ್ಚ ೨೦-೨೧ ರಂದು ೧೯ನೇಯ ರಾಜ್ಯಮಟ್ಟ ಸಮ್ಮೇಳನ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ ಮತ್ತು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ಪಿ ಮತ್ತು ಜೆಎಮ್ ಬೋಹರಾ ಪದವಿ ಮಹಾವಿದ್ಯಾಲಯ ಸುರಪೂರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.

Contact Your\'s Advertisement; 9902492681

ಆದರೆ, ವಿಶ್ವವಿದ್ಯಾಲಯದ ಘಟಿಕೋತ್ಸವವು ೨೦ ಮಾರ್ಚ ರಂದು ಜರುಗಲಿರುವ ಕಾರಣ ೧೯ನೇ ರಾಜ್ಯಮಟ್ಟದ ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನವನ್ನು ೨೦-೨೧ ಮಾರ್ಚ ೨೦೨೦ ರ ಬದಲಾಗಿ ಏಪ್ರಿಲ್ ೩-೪ ೨೦೨೦ ರಂದು ಜರುಗಿಸಲು ತಿರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here