ಕಾರ್ಮಿಕರನ್ನು ಕರೆತರಲು ಬಸ್ ಸೌಲಭ್ಯಕ್ಕಾಗಿ ಸಿಎಂಗೆ ಮನವಿ, ಶಾಸಕ ಖರ್ಗೆ 2 ತಿಂಗಳ ಸಂಬಳ ದೇಣಿಗೆ

0
83

ಕಲಬುರಗಿ: ಲಾಕ್ ಡೌನ್ ದಿಂದ  ಬೆಂಗಳೂರು ಸೇರಿದಂತೆ ಹೊರರಾಜ್ಯದಲ್ಲಿ ಸಿಲುಕಿರುವ ಕೂಲಿ‌ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರಲು ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ‌ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಕೊರೋನಾ ಸೋಂಕು ತನ್ನ ಕರಾಳ ಛಾಯೆ ದಿನೇ‌ದಿನೇ ಚಾಚುತ್ತಿದೆ. ಗುಳೆ ಹೋಗಿರುವ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ,‌ಕೊಪ್ಪಳ ಹಾಗೂ ಬಳ್ಳಾರಿ‌ ಜಿಲ್ಲೆಯ ಕೂಲಿ ಕಾರ್ಮಿಕರು ಬೆಂಗಳೂರು, ಗೋವಾ, ಹೈದರಾಬಾದ್, ಪುಣೆ, ಮುಂಬೈ ಸೇರಿದಂತೆ ಹಲವಾರು ನಗರಗಳಲ್ಲಿ ತಾವಿರುವ ಜಾಗಗಳಲ್ಲಿ ಸಿಲುಕಿ ಅನ್ನ ನೀರಿಗಾಗಿ ಪರದಾಡುತ್ತಿದ್ದಾರೆ.

Contact Your\'s Advertisement; 9902492681

ಇನ್ನೂ ಕೆಲವರು ನೂರಾರು ಮೈಲಿ ದೂರದ ತಮ್ಮ ಊರುಗಳಿಗೆ ಮಕ್ಕಳು ಮರಿಗಳೊಂದಿಗೆ ತಮ್ಮ ಲಗ್ಗೇಜ್ ಗಳನ್ನು ಹೊತ್ತುಕೊಂಡು ಹಗಲು ರಾತ್ರಿಯೆನ್ನದೆ ಕಾಲ್ನಡಿಗೆಯಲ್ಲಿ ಬರುತ್ತಿರುವ ದೃಶ್ಯ ಹಾಗೂ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು ಖುದ್ದಾಗಿ ಭೇಟಿ ನೀಡಿ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೊರೋನಾ ವಿರುದ್ದದ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಭೇಟಿ ನೀಡಿ ತನ್ನ ಎರಡು ತಿಂಗಳ ಸಂಬಳವನ್ನು (2 ಲಕ್ಷ) ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದ್ದು ಸಿಎಲ್ ಪಿ ಲೀಡರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹಾಗೂ ಶಾಸಕ ಅಜಯ್ ಸಿಂಗ್ ಹಾಜಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here