ರಾಜ್ಯದ ಕೂಲಿ ಕಾರ್ಮಿಕರಿಗೆ ಸ್ವ-ಗ್ರಾಮಕ್ಕೆ ಕರೆತರುವ ವ್ಯವಸ್ಥೆಗೆ ಶಾಸಕ ಖರ್ಗೆ ಆಗ್ರಹ

0
49

ಕಲಬುರಗಿ: ಲಾಕ್ ಡೌನ್ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರರಾಜ್ಯಗಳಲ್ಲಿ ಬಂಧಿಯಂತಾಗಿರುವ ಕಲ್ಯಾಣ ಕರ್ನಾಟಕದ ಕೂಲಿ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಅವರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಬರ ಪೀಡಿತ ಕಲ್ಯಾಣ ಕರ್ನಾಟಕದ ಜನರು ಬೆಂಗಳೂರು, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಹೈದರಾಬಾದ್ ಮುಂತಾದ‌ ಕಡೆ ಕೆಲಸ ಅರಸಿ ಗುಳೆ ಹೋಗಿದ್ದು ಪ್ರಸ್ತುತ ಕೊರೋನಾ ಸೋಂಕು ಹಬ್ಬುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರಿಂದ ಕೂಲಿ ಕಾರ್ಮಿಕರು ತಾವಿರುವ ಜಾಗಗಳಲ್ಲಿ ಅನ್ನ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಈ‌ ಕೂಡಲೇ ಅವರನ್ನು ತಮ್ಮ ಸ್ವಂತ ಊರುಗಳಿಗೆ ಕರೆಸಿಕೊಳ್ಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿ ಇಲ್ಲಿಗೆ ಬಂದ ನಂತರ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿದ ಆ ನಂತರ ಸರಕಾರಿ ಶಾಲೆ ಕಲ್ಯಾಣ‌ಮಂಟಪ‌ ಮುಂತಾದ ಕಡೆ ಅವರಿಗೆ ಹದಿನಾಲ್ಕು ದಿನಗಳ‌ ಕಾಲ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆದ್ದರಿಂದ‌ ಈ ನಿಟ್ಟಿನಲ್ಲಿ ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಮ್ಮ ಪತ್ರದಲ್ಲಿ‌ ಸಿಎಂಗೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಕೂಲಿ ಕಾರ್ಮಿಕರು ಸಿಕ್ಕ ಸಿಕ್ಕ ಖಾಸಗಿ ವಾಹನದಲ್ಲಿ ತಮ್ಮ ತಮ್ಮ ಊರುಗಳಿಗೆ ತಂಡೋಪತಂಡವಾಗಿ ಬರುತ್ತಿದ್ದು ಅವರನ್ನು ಸೋಂಕು ತಪಾಸಣೆಗೆ ಒಳಪಡಿಸುತ್ತಿಲ್ಲ. ರಾಜ್ಯ ಈಗಾಗಲೇ ಮೂರನೆಯ ಹಂತ ತಲುಪುವ ಭೀತಿ ಎದುರಿಸುತ್ತಿದ್ದು .‌ಇದರಿಂದಾಗಿಯೂ ಕೂಡಾ ಸೋಂಕು ಹಬ್ಬುವ ಸಾಧ್ಯತೆ ‌ಇದೆ. ಈ‌ ಹಿನ್ನೆಲೆಯಲ್ಲಿ ಕ್ರಮ ಅಗತ್ಯವಾಗಿದೆ‌ ಎಂದು ತಿಳಿಸಿದ್ದಾರೆ.

ವಿದೇಶದಲ್ಲಿರುವ ಭಾರತೀಯರನ್ನ ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಕರೆತಂದರೆ, ನಮ್ಮ ದೇಶದ ಬೇರೆ ಬೇರೆ ಭಾಗಗಳಲ್ಲಿ‌ ವಾಸಿಸುತ್ತಿರುವ ಕೂಲಿ‌ಕಾರ್ಮಿಕರನ್ನು ಸುರಕ್ಷಿತ ವಾಗಿ ಅವರ ಊರುಗಳಿಗೆ ವಾಪಸ್ ಕರೆತಂದು ವೈದ್ಯಕೀಯ ತಪಾಸಣೆ ನಡೆಸುತ್ತಿಲ್ಲ ಅಂದು ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here