ವಸತಿ ನಿಲಯಗಳ ಗುರಿ ಹೆಚ್ಚಿಸಲು ಆಗ್ರಹ

0
60

ಸುರಪುರ: ಹಿಂದುಳಿದ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಟಾರ್ಗೇಟನ್ನು ಹೆಚ್ಚಿಸಬೇಕೆಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಹೇಳಿದರು.

ನಗರದ ಮಡಿವಾಳ ಮಾಚದೇವ ವೃತ್ತದ ಹತ್ತಿರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಶಿಕ್ಷಣದಲ್ಲಿ ನಮ್ಮ ತಾಲೂಕು ಹಿಂದುಳಿಯಲು ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ಮತ್ತು ವಸತಿ ನಿಲಯಗಳಲ್ಲಿ ಪ್ರವೇಶ ದೊರಕದೆ ಪ್ರತಿದಿನ ಬಸ್ಸು ಮತ್ತು ಇತರೆ ವಾಹನಗಳ ಸಾಹಯದಿಂದ ಕಾಲೇಜು ಮತ್ತು ಶಾಲೆಗಳಿಗೆ ತೆರಳುವುದರಿಂದ ಅರ್ಧ ಸಮಯ ಪ್ರಯಾಣದಲ್ಲೆ ಕಳೆಯುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥೀಗಳ ಓದಿನ ಮೇಲೆ ಪರಿಣಾಮ ಬೀರಿ ಅಭ್ಯಶದಲ್ಲಿ ಹಿಂದುಳಿಯುತ್ತಿದ್ದಾರೆ ತಕ್ಷಣೆವೆ ಸರಕಾರ ಮತ್ತು ಸಮಾಜ ಕಲ್ಯಾಣ ಸಚಿವರು ಎಚ್ಚೆತ್ತುಕೊಂಡು ನಮ್ಮ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯಾರ್ಥಿ ನಿಲಯ ಟಾರ್ಗೇಟನ್ನು ಹೆಚ್ಚಸಿ ಅವರ ವಿದ್ಯಾಬ್ಯಾಸಕ್ಕೆ ನೆರವು ನೀಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಇನ್ನು ಇರುವ ಅರ್ಧಕ್ಕಿಂತ ಹೆಚ್ಚು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದಾರೆ ಇವುಗಳು ತುಂಬಾ ಇಕ್ಕಿಟ್ಟಾಗಿರುವ ನಿಲಯಗಳಲ್ಲಿ ವಿದ್ಯಾರ್ಥಿಗಳು ಒದುವುದಾದರು ಹೇಗೆ ಇನ್ನು ನಮ್ಮ ತಾಲೂಕಿನಲ್ಲಿ ಹಲವು ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಮೂಲ ಭೂತ ಸೌಕರ್ಯಗಳು ಒದಗಿಸಬೇಕು ಮತ್ತು ಸುರಪುರ ನಗರಕ್ಕೆ ನವೋದ ಶಾಲೆ ಮತ್ತು ಸೈನಿಕ ಶಾಲೆಯನ್ನು ಮಂಜೂರುಗೊಳಿಸಲು ಬೇಡಿಕೆ ಕಳಿಸಿ ಇಲ್ಲಯ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬರೆದ ವಿವಿಧ ಬೇಡಿಕೆಯೊಳ್ಳ ಮನವಿ ಪತ್ರವನ್ನು ಉಪ ತಹಶಿಲ್ದಾರ ನರಸಿಂಹ ಅವರಿಗೆ ಸಲ್ಲಿಸಿದರು.

ಗೋಪಾಲ ಬಾಗಲಕೋಟ, ಮಾನಯ್ಯ ದೊರೆ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ, ದೇವಪ್ಪ ದೇವರಮನಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here