ತಾಲ್ಲೂಕು ನೇಕಾರರ ಸೌಹಾರ್ಧ ಸಹಕಾರಿ ಬ್ಯಾಂಕ್ ಆರಂಭ

0
73

ಸುರಪುರ: ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ತಾಲ್ಲೂಕು ನೇಕಾರರ ಸೌಹಾರ್ಧ ಸಹಕಾರಿ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಕಾಅರ್ಯಕ್ರಮದ ಆರಂಭದಲ್ಲಿ ಮಹಾಲಕ್ಷ್ಮೀ ಮತ್ತು ಸರಸ್ವತಿ ಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಹಕಾರಿ ಸೌಹಾರ್ಧದ ಉದ್ಘಾಟಕರಾಗಿ ಆಗಮಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,ಸಹಕಾರಿ ಸಂಘದಿಂದ ಬಡ ನೇಕಾರರಿಗೆ ಅನುಕೂಲವಾಗಲಿದೆ.ನೇಕಾರರು ಸಾಲ ಪಡೆದು ನೇಕಾರಿಕೆಯನ್ನು ಅಭೀವೃಧ್ಧಿ ಪಡಿಸುವ ಜೊತೆಗೆ ಬ್ಯಾಂಕಿನ ಅಭೀವೃಧ್ದಿಗೆ ಸಹಕರಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ವೀರಸಂಗಪ್ಪ ಹಾವೇರಿ ಮಾತನಾಡಿ,ಎಲ್ಲರು ಬ್ಯಾಂಕಿನ ನಿಯಮದಂತೆ ನಡೆದುಕೊಂಡರೆ ನಮ್ಮ ಅಭೀವೃಧ್ಧಿ ಜೊತೆಗೆ ಬ್ಯಾಂಕಿನ ಏಳಿಗೆ ಸಾಧ್ಯವಿದೆ.ಆದ್ದರಿಂದ ಎಲ್ಲರು ಸಾಲ ಪಡೆದು ಸರಿಯಾದ ಸಮಯಕ್ಕೆ ಮರಳಿಸುವ ಮೂಲಕ ಬ್ಯಾಂಕು ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಹಕಾರ ನೀಡುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಶಿವಶಂಕರ ಶಾಬಾದಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಹಣಮೇಶಗೌಡ, ಮಲ್ಲಿಕಾರ್ಜುನ ಚೆಟ್ಟಿ,ಬಸವರಾಜ ಮಂಟೆ, ಹಣಮಮ್ಮ ಕೆಂಡದ, ಚೆನ್ನಪ್ಪ ಕಡದರಾಳ, ಬಸಪ್ಪ ಗಿಡ್ರೆ, ಬಸವರಾಜ ಗೊನಟ, ಸಂಗಣ್ಣ ಪೂಜಾರಿ, ಬಸವರಾಜ ಪೂಜಾರಿ,ಕುಮಾರಸ್ವಾಮಿ ಗುಡ್ಡಡಗಿ, ಲಿಂಗಣ್ಣ ರಾಯಚೂರಕರ್, ಶ್ರೀನಿವಾಸ ಪಾಣಿಭಾತೆ, ಶ್ರೀನಿವಾಸ ಬಲಪೂರ, ಮಲ್ಲಿಕಾರ್ಜುನ ರಾವುತ್ ಇದ್ದರು. ಕೋರಿಸಂಗಮ್ಮ ಗಡ್ಡದ ಪ್ರಸ್ತಾವಿಕವಾಗಿ ಮಾತನಾಡಿದರು, ಸಂಗಪ್ಪ ಸಿರೆಗೋಳ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here