ಸವಿತಾ ಸಮಾಜದ ಅಭಿವೃದ್ಧಿಗೆ ಬದ್ಧ:  ಡಿಸಿಎಂ ಪರಮೇಶ್ವರ

0
85

ಕಲಬುರಗಿ: ಸವಿತಾ ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಬದ್ಧವಾಗಿದೆ ಎಂದು ಡಿಸಿಎಂ ಡಾ ಜಿ ಪರಮೇಶ್ವರ ಭರವಸೆ ನೀಡಿದರು.

ನಗರದ ಗ್ರ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸವಿತಾ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸವಿತಾ ಸಮಾಜ ಸಮಾಜದಲ್ಲಿ ಹಲವಾರು ರೀತಿಯ ಶೋಷಣಗೆ ಒಳಗಾದ ಸಮುದಾಯವಾಗಿದೆ. ಎಲ್ಲ ರಂಗದಲ್ಲಿ ಹಿಂದುಳಿದಿರುವ ಸಮುದಾಯಕ್ಕೆ ಅಗತ್ಯ ಅನುಕೂಲಗಳನ್ನು ಒದಗಿಸಿ ಮುಖ್ಯವಾಹಿನಿಗೆ ತರಲು ಸರಕಾರ ಶ್ರಮಿಸುತ್ತದೆ ಎಂದರು.

Contact Your\'s Advertisement; 9902492681

ಕೆ.ಸಿ. ವೇಣುಗೋಪಾಲ ಅವರು ಮೇಲ್ಮನೆಯಲ್ಲಿ ನಿಮ್ಮ ಸಮಾಜವನ್ನು ಪ್ರತಿನಿಧಿಸುತ್ತಾರೆ. ಆದರೆ ಎಲ್ಲ ಹಂತದಲ್ಲೂ ನಿಮ್ಮ ಸಮಾಜದ ವ್ಯಕ್ತಿಗಳು ಅಧಿಕಾರಕ್ಕೆ ಬರಬೇಕು ಅಂದಾಗಲೇ ನಿಮಗೆ ಸಿಗಬೇಕಾದ ಸೌಲಭ್ಯ ಹಾಗೂ ಗೌರವ ಸಿಗಲಿವೆ ಎಂದು ಅಭಿಪ್ರಾಯಪಟ್ಟರು.  ಪಸ್ತುತ ಸವಿತಾ ಸಮಾಜ ಪ್ರವರ್ಗ 2 A ಬರುತ್ತಿದೆ. ಇದೇ ಪ್ರವರ್ಗದಲ್ಲಿ ಇತರೆ ಪ್ರಬಲ ಸಮುದಾಯಗಳನ್ನು ಸೇರಿಸಲಾಗಿದೆ. ಮುಂದಿನ‌ ದಿನಗಳಲ್ಲಿ ಈ ಕುರಿತು ಸರಕಾರ ಮಟ್ಟದಲ್ಲಿ‌ಚರ್ಚಿಸಿ ಅನ್ಯಾಯ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಸವಿತಾ ಮಹರ್ಷಿಯ ಪ್ರತಿಮೆ ಸ್ಥಾಪನೆಗೆ ವೇಣುಗೋಪಾಲ ಅವರು ಸಿಎಂ ಅವರಿಗೆ ಮನವಿ ಮಾಡಿದ್ದಾರೆ.ಆದಷ್ಟು ಬೇಗ ಬೇಡಿಕೆ ಈಡೇರಿಸಲಾಗುವುದು ಎಂದರು.  ಜೊತೆಗೆ ಚಿತ್ತಾಪುರ ತಾಲೂಕಿಮ ಹುಂಚೂರು ಗ್ರಾಮದಲ್ಲಿರುವ ಸವಿತಾ ಸಮುದಾಯದ ಮಠಕ್ಕೆ ಹೆಚ್ಚಿನ ಪ್ರೋತ್ಸಾಹ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದರಾದ ಹಿರಿಯ ನಾಯಕ ಎಮ್ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಲೋಲಸಭೆ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದಂತೆ ಈ ಚಿಂಚೋಳಿಯಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೇಸ ಅಭ್ಯರ್ಥಿಗೆ ಬೆಂಬಲಿಸಿ ಆರಿಸಿ ಕಳಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೇಸ ಪಕ್ಷ ಎಲ್ಲ ಜನಾಂಗದವರನ್ನು ಸಮುದಾಯಗಳನ್ನು ಒಟ್ಟಿಗೆ ತೆಗದುಕೊಂಡು ಹೋಗುತ್ತದೆ. ಸಂವಿಧಾನದ ಅಡಿಯಲ್ಲಿ ಸಿಗುವ ಎಲ್ಲ ಅವಕಾಶ ಹಾಗೂ ಸೌಲಭ್ಯಗಳನ್ನು ಸವಿತಾ ಸಮಾಜಕ್ಕೆ ಒದಗಿಸಲಾಗುವುದು ಎಂದರು. ಸಮಾಜದ ಬೆಳವಣಿಗೆಗೆ ಸರಕಾರದೊಂದಿಗೆ ಕೈಜೋಡಿಸುವಂತೆ ಹಿರಿಯ ಮುಖಂಡರಿಗೆ ಮನವಿ ಮಾಡಿದ ಅವರು ಸರಕಾರ ಸಮಾಜದ ಅಭಿವೃದ್ದಿಗೆ ಬೇಕಾಗುವ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಕಾಂಗ್ರೇಸ್ ಪಕ್ಷ ಹಾಗೂ ಡಾ. ಜಿ ಪರಮೇಶ್ವರ ಅವರು ವೇಣುಗೋಪಾಲ್ ಅವರನ್ನು ಶಾಸಕರನ್ನಾಗಿ ಮಾಡಿ‌ ಸವಿತಾ ಸಮಾಜವನ್ನು ರಾಜಕೀಯವಾಗಿ‌ ಗುರುತಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here