ಸುರಪುರ: ನಗರದ ಕುಂಬಾರಪೇಟೆಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಅಪಾರ ಪ್ರಮಾಣದ ಮೇವು ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಕುಂಬಾರಪೇಟೆಯ ರೈತ ಯಂಕಪ್ಪ ಮ್ಯಾಗೇರಿ ಎಂಬುವವರಿಗೆ ಸೇರಿದ ಬಣಿವೆಗಳು ಎಂದು ತಿಳಿದುಬಂದಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಕುಂಬಾರಪೇಟೆಯಿಂದ ಗಂಜ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಎರಡು ಭತ್ತದ ಹುಲ್ಲಿನ ಮತ್ತು ಒಂದು ಜೋಳದ ಕಣಿಕೆ ಹಾಗು ಒಂದು ಶೇಂಗಾದ ಒಟ್ಟಿನ ಒಟ್ಟು ನಾಲ್ಕು ಬಣಿವೆಗಳನ್ನು ಹಾಕಲಾಗಿತ್ತು,ಮದ್ಹ್ಯಾನ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.ಮನೆಯಲ್ಲಿ ನಲವತ್ತಕ್ಕು ಹೆಚ್ಚಿನ ಜಾನುವಾರುಗಳಿವೆ ಅವುಗಳಿಗೆ ಈ ಮೇವೆ ಆಸರೆಯಾಗಿತ್ತು,ಈಗ ಎಲ್ಲವೂ ಸುಟ್ಟು ಕರಕಲಾಗಿದೆ ಇದರಿಂದ ದನಗಳಿಗೆ ಏನು ಮೇಯಿಸುವುದೆಂದು ಚಿಂತೆಯಾಗಿದೆ ಎಂದು ರೈತ ಯಂಕಪ್ಪ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದು.ಸರಕಾರ ದನಗಳಿಗೆ ಮೇಯಿಸಲು ಮೇವಿನ ವ್ಯವಸ್ಥೆ ಮಾಡಬೇಕೆಂದು ಬೇಡಿಕೊಳ್ಳುತ್ತಿದ್ದಾರೆ.
ಬಣಿವೆಗಳಿಗೆ ಬೆಂಕಿ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರಾದರೂ ಅಗ್ನಿ ಶಾಮಕ ಸಿಬ್ಬಂದಿ ಬರುವ ಮುನ್ನವೆ ಎಲ್ಲಾ ಮೇವು ಸುಟ್ಟು ಭಸ್ಮವಾಗಿದೆ.ಸುಟ್ಟಿರುವ ಮೇವಿನ ಅಂದಾಜು ಮೊತ್ತ ಒಂದುವರೆ ಲಕ್ಷ ಆಗಲಿದ್ದು ಅಷ್ಟೊಂದು ಪ್ರಮಾಣದ ಮೇವು ಖರೀದಿಸಲು ಸಾಧ್ಯವಾಗದೆ ರೈತ ತನ್ನ ಅಸಾಹಯಕತೆ ತೋರುತ್ತಿದ್ದಾರೆ.ಸರಕಾರ ಕೂಡಲೆ ಮೇವು ಒದಗಿಸಬೇಕೆಂದು ರೈತ ಸಂಘದ ಮುಖಂಡ ಮಲ್ಲಪ್ಪ ಹುಬ್ಬಳ್ಳಿ ಪಶು ಸಂಗೋಪನ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.