ಗುಲ್ಬರ್ಗ ವಿವಿ ಪದವಿ ಪರೀಕ್ಷೆಯ ಶುಲ್ಕ ಸಕರ್ಾರವೇ ಭರಿಸಲಿ

0
102

ಕಲಬುರಗಿ: ಗುಲಬಗರ್ಾ ವಿಶ್ವವಿದ್ಯಾಲಯ ಕಲಬುರಗಿ, ವಿಶ್ವವಿದ್ಯಾಲಯವು ಎಲ್ಲಾ ಸರಕಾರಿ ಪದವಿ ಮಹಾವಿದ್ಯಾಲಯ ಹಾಗೂ ಖಾಸಗಿ ಮಹಾವಿದ್ಯಾಲಯಗಳಿಗೆ ಜುಲೈ 2020 ರಲ್ಲಿ ಜರುಗಲಿರುವ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಮ್., ಬಿ.ವಿ.ಎ., ಬಿ.ಎಫ್.ಎ. ಹಾಗೂ ಬಿ.ಎಸ್.ಡಬ್ಲೂ (2, 4, 6) ನೇ ಸೆಮಿಸ್ಟರ್ ಕ್ಲಷ್ಟರ್ ಪರೀಕ್ಷೆಗಳ ಪರೀಕ್ಷಾ ಶುಲ್ಕ ಭರಿಸಲು ಪ್ರಾರಂಭ ದಿನಾಂಕ 18.05.2020 ನಿಗದಿ ಮಾಡಿ ನೋಟೀಸ್ ಕಳುಹಿಸಲಾಗಿದೆ.

ಆದರೆ, ಇಡೀ ವಿಶ್ವವನ್ನು ಕಾಡುತ್ತಿರುವ ಕೊವಿಡ್ 19 ಮಹಾಮಾರಿಯಿಂದ ತತ್ತರಿಸುತ್ತಿದೆ. ಇದರ ವಿರುದ್ಧ ಹೋರಾಡಲು ಸಕರ್ಾರವೇ ಲಾಕ್ಡೌನ್ ಘೋಷಣೆ ಮಾಡಿದೆ. ಅಲ್ಲದೆ, ಯಾವುದೇ ಆಥರ್ಿಕ ಚಟುವಟಿಕೆ ಇಲ್ಲದೆ, ಇದ್ದಂತಹ ಉದ್ಯೋಗ ಕಳೆದುಕೊಂಡು ಕಷ್ಟದಲ್ಲಿರುವ ನಮ್ಮ ಬಡ ವಿದ್ಯಾಥರ್ಿಗಳ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಎಷ್ಟೋ ವಿದ್ಯಾಥರ್ಿಗಳ ತಂದೆ ತಾಯಿಯಂದಿರು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಿದ್ದು ಮರಳಿ ತಮ್ಮ ಊರುಗಳಿಗೆ ಬರಲು ಕಷ್ಟ ಪಡುತ್ತಿದ್ದಾರೆ. ಅವರ ಜೀವನ ಯಾತನಾಮಯವಾಗಿದ್ದು ವಿಶ್ವವಿದ್ಯಾಲಯ ವಿದ್ಯಾಥರ್ಿಗಳಿಗೆ ಈ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಭರಿಸಲು ಹೇಳಿದ್ದು ಗಾಯದ ಮೇಲೆ ಭರೆ ಎಳೆದಂತಾಗಿದೆ ಸಂಘಟನೆಯ ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್,, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಈರಣ್ಣಾ ಇಸಬಾ

Contact Your\'s Advertisement; 9902492681

ಆದಕಾರಣ, ಇಂತಹ ಪರಿಸ್ಥಿತಿಯಲ್ಲಿ ಈ ಸಾಲಿನ ಪರೀಕ್ಷಾ ಶುಲ್ಕ ಹಾಗೂ ಪ್ರವೇಶಶುಲ್ಕವನ್ನು ಸಕರ್ಾರವೇ ಭರಿಸಬೇಕು. ವಿಶ್ವವಿದ್ಯಾಲಯವು ಆನ್ಲೈನ್ ತರಗತಿ ನಡೆಸುತ್ತಿದ್ದು ಎಲ್ಲಾ ವಿದ್ಯಾಥರ್ಿಗಳ ಹತ್ತಿರ ಸ್ಮಾಟರ್್ಫೋನ್ ಹಾಗೂ ಇತರೆ ಹಲವಾರು ಸಮಸ್ಯೆಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಕೆಲವು ತಿಂಗಳುಗಳ ಕಾಲ ಕಾಲೇಜುಗಳನ್ನು ಪ್ರಾರಂಭಿಸಿ ತರಗತಿಗಳನ್ನು ನಡೆಸಬೇಕು. ಮತ್ತು ಕೆಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದುವೇಳೆ ಪರೀಕ್ಷಾ ಶುಲ್ಕವನ್ನು ವಿದ್ಯಾಥರ್ಿಗಳು ಕಟ್ಟಿದ್ದರೆ ಅದನ್ನು ಮರುಪಾವತಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ಮುಂಜಾಗೃತವಹಿಸಬೇಕು. ಹಾಗೂ ವಿದ್ಯಾಥರ್ಿಗಳಿಗೆ ಸಾಮಾಜಿಕ ಅಂತರ, ಸ್ಯಾನೀಟೈಸರ್, ಮಾಸ್ಕ್ ವಿತರಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎ.ಐ.ಡಿ.ಎಸ್.ಓ.) ಕಲಬುರಗಿ ಜಿಲ್ಲಾ ಸಮಿತಿಯು ಮನವಿಮಾಡಿಕೊಳ್ಳುತ್ತದೆ.
ಬೇಡಿಕೆಗಳು

1. ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕ ಪೂತರ್ಿಯಾಗಿ ಸಕರ್ಾರವೇ ಭರಿಸಬೇಕು.
2. ಆನ್ಲೈನ್ ತರಗತಿಗಳನ್ನು ಕೈಬಿಟ್ಟು ಕಾಲೇಜುಗಳನ್ನು ಪ್ರಾರಂಭಿಸಿ ಕೆಲವು ತಿಂಗಳು ತರಗತಿಗಳನ್ನು ನಡೆಸಬೇಕು.
3. ಯಾವುದೇ ವಿದ್ಯಾಥರ್ಿ ಪರೀಕ್ಷಾ ಶುಲ್ಕ ಭರಿಸಿದ್ದಲ್ಲಿ ಅದನ್ನು ಮರುಪಾವತಿ ಮಾಡಬೇಕು.
4. ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು.
5. ಎಲ್ಲಾ ವಿದ್ಯಾಥರ್ಿಗಳಿಗೆ ಉಚಿತವಾಗಿ ಮಾಸ್ಕ್, ಸ್ಯಾನೀಟೈಸರ್ ಕೊಡಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here