ಹದಿನಾಲ್ಕು ದಿನಗಳ ದಿಗ್ಬಂಧನ ಮುಗಿಸಿ ಮನೆಗೆ ಮರಳಿದ ಕಾರ್ಮಿಕರು

0
56

ಸುರಪುರ: ಕಳೆದ ಹದಿನಾಲ್ಕು ದಿನಗಳಿಗು ಹೆಚ್ಚು ದಿನಗಳಿಂದ ಕ್ವಾರಂಟೈನ್‍ಲ್ಲಿ ಉಳಿದುಕೊಂಡಿದ್ದ ಮಹಾರಾಷ್ಟ್ರ ಗುಜರಾತ್‍ಗಳಿಂದ ಆಗಮಿಸಿದ್ದ ವಲಸೆ ಕಾರ್ಮಿಕರನ್ನು ಇಂದು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗುತ್ತಿದೆ ಎಂದು ತಹಸೀಲ್ದಾರ ನಿಂಗಣ್ಣ ಬಿರಾದಾರ್ ತಿಳಿಸಿದರು.

ನಗರದ ಸರಕಾರಿ ಪಾಲಿ ಟೆಕ್ನಿಕ್ ಕಾಲೇಜ್‍ನಲ್ಲಿದ್ದ 136 ಜನ ವಲಸೆ ಕಾರ್ಮಿಕರ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ,ನಗರದ ಮೂರು ಕ್ವಾರಂಟೈನ್ ಕೇಂದ್ರಗಳು ಮತ್ತು ದೇವಾಪುರ ಶಾಲೆಯಲ್ಲಿನ ಕ್ವಾರಂಟೈನ್ ಕೇಂದ್ರ ದಿಂದ ಸೇರಿದಂತೆ ಇಂದು ಮೂರು ನೂರಕ್ಕೂ ಹೆಚ್ಚು ಜನರನ್ನು ಅವರ ಮನೆಗೆ ಮರಳಿಸಲಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಇಂದು ಮೂರು ನೂರಕ್ಕೂ ಹೆಚ್ಚು ಜನರ ಆರೋಗ್ಯದ ವರದಿ ಬಂದಿದ್ದು ಎಲ್ಲರೂ ನೆಗೆಟಿವ್ ಬಂದಿದ್ದು,ನೆಗೆಟಿವ್ ವರದಿ ಬಂದವರನ್ನು ಕಳುಹಿಸಿಕೊಡಲಾಗುತ್ತಿದೆ.ಇನ್ನೂ ಅನೇಕ ಜನರ ವರದಿ ಬರಬೇಕಿದೆ.ಇಂದು ಪಾಲಿಟೆಕ್ನಿಕ್ ಕಾಲೇಜ್ ಕ್ವಾರಂಟೈನ್136 ,ತಾಲೂಕು ಪಂಚಾಯತಿ ಬಳಿಯ ವಿದ್ಯಾರ್ಥಿನಿಯರ ವಸತಿ ನಿಲಯದ 49 ಜನರನ್ನು ಹಾಗು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ 36 ಮತ್ತು ದೇವಾಪುರ ಶಾಲೆಯಲ್ಲಿರುವವರು 86 ಜನ ಹಾಗೂ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ವಸತಿ ನಿಲಯದ 12 ಜನರನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದರು.

ದಿಗ್ಬಂಧನ ಕೇಂದ್ರದಿಂದ ಹೊರ ಬಂದ ಕಾರ್ಮಿಕರು ಸಂತಸಗೊಂಡು ಮಾತನಾಡಿ,ಇಲ್ಲಿಯವರೆಗೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸೇವೆ ಮಾಡಿದ ತಹಸೀಲ್ದಾರರು,ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಪೊಲೀಸ್ ಮತ್ತು ಸ್ವಚ್ಛತಾ ಇಲಾಖೆಯ ಸಿಬ್ಬಂದಿಗಳಿಗೆ ವಂದಿಸುವುದಾಗಿ ತಿಳಿಸಿದಿರು.

ದಿಗ್ಬಂಧನ ಕೇಂದ್ರದಿಂದ ಬಿಡುಗಡೆಗೊಳಿಸಿದ ಎಲ್ಲರ ಕೈಗಳಿಗೂ ಸೀಲ್ ಹಾಕುವ ಜೊತೆಗೆ ಮನೆಗೆ ಹೋದ ನಂತರವು ಹದಿನಾಲ್ಕು ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ಹಾಗು ಆರೋಗ್ಯದಲ್ಲಿ ಏನಾದರು ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಡುವಂತೆ ತಿಳಿಸಿ ಬಸ್‍ಗಳ ಮೂಲಕ ಬಿಳ್ಕೊಡಲಾಯಿತು.ಈ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರಗಳ ಜಿಲ್ಲಾ ನೋಡಲ್ ಅಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here