ಕಲಬುರಗಿ: ಅರೋಗ್ಯ ಇಲಾಖೆಯು ಗುರುವಾರ ಸಾಯಂಕಾಲ ಹೊರಡಿಸಿರುವ ಬುಲೆಟಿನ್ ನಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಸರ್ಕಾರಿ ಕ್ವಾರಂಟೈನ್ ನಲ್ಲಿರುವ ಜಿಲ್ಲೆಯ ಅಫಜಲಪೂರ ತಾಲೂಕಿನ 4 ವರ್ಷದ ಬಾಲಕ ಮತ್ತು 25 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 190ಕ್ಕೆ ಹೆಚ್ಚಳವಾಗಿದ್ದು, 108 ಜನರು ಸಕ್ರೀಯ ರೋಗಿಗಳಾಗಿದ್ದಾರೆ.
ಅಫಜಲಪೂರ ತಾಲೂಕಿನ ಶಿರವಾಳ ಗ್ರಾಮದ 25 ವರ್ಷದ ಮಹಿಳೆ (P-2520) ಮತ್ತು ನಂದರ್ಗಾ ಗ್ರಾಮದ 4 ವರ್ಷದ ಗಂಡು ಮಗುವಿಗೆ (P-2521) ಕೋವಿಡ್-19 ದೃಢವಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.