ಆಶಾ ಕಾರ್ಯಕರ್ತೆಯರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ರೂ.2 ಲಕ್ಷ ಸಹಾಯಧನ

0
70

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಹಾದಾಸೋಹಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಆಶಾ ಕಾರ್ಯಕರ್ತೆರಿಗಾಗಿ  ರೂ.2 ಲಕ್ಷ ಸಹಾಯ ಧನದ ಚೆಕ್  ಶುಕ್ರವಾರ ಜಿಲ್ಲಾ ಸಹಕಾರಿ ಸಂಘದ ಉಪ ನಿರ್ಭಂಧಕರಾದ ಸಿ.ಎಸ್ ನಿಂಬಾಳ ಮತ್ತು ಸಹಕಾರಿ ಇಲಾಖೆಯ ಇತರೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಪ್ರೊ. ಕಿರಣ ಮಾಕಾ ಇದ್ದರು.

ಕಲಬುರಗಿ: ಮಾರಣಾಂತಿಕ ರೋಗ ಕೋವಿಡ್-19 ತಡೆಗಟ್ಟುವದಕ್ಕಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಹಾದಾಸೋಹಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ರೂ. 2 ಲಕ್ಷ ಸಹಾಯಧನದ ಚೆಕ್ನ್ನು ದೇಣಿಗೆಯಾಗಿ ನೀಡಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಮತ್ತು ಡಾ. ಅಪ್ಪಾಜೀ ಜೊತೆಗೂಡಿ 2 ಲಕ್ಷ ರೂಪಾಯಿ ಚೆಕ್ಅನ್ನು ಕಲಬುರಗಿ ಜಿಲ್ಲಾ ಸಹಕಾರಿ ಸಂಘದ ಉಪ ನಿರ್ಭಂಧಕರಾದ ಸಿ.ಎಸ್ ನಿಂಬಾಳ ಮತ್ತು ಸಹಕಾರಿ ಇಲಾಖೆಯ ಇತರೆ ಅಧಿಕಾರಿಗಳಿಗೆ ಶುಕ್ರವಾರ ಚೆಕ್ ಹಸ್ತಾಂತರಿಸಿದರು. ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮಿ ಮಾಕಾ, ಎಂ.ಸಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಮಾಕಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಪ್ಪಾಜಿ, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕತರ್ೆಯರ ಕೊಡುಗೆ ಅಪಾರವಾಗಿದೆ. ಇವರ ಸತತ ಪ್ರಯತ್ನವನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 3.000 ರೂಪಾಯಿ ನೀಡುತ್ತಿದ್ದಾರೆ. ಆಶಾ ಕಾರ್ಯಕತರ್ೆಯರಿಗೆ ಆಥರ್ಿಕ ನೆರವು ಮತ್ತು ಅವರ ಕರ್ತವ್ಯಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here