ಸುರಪುರ: ಇಂದು ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ದೊಡ್ಡ ದೊಡ್ಡ ಪಾರ್ಟಿಗಳ ಮೂಲಕ ಜನುಮ ದಿನ ಆಚರಿಸಿಕೊಳ್ಳುವವರೆ ಹೆಚ್ಚಾಗಿದ್ದಾರೆ.ಆದರೆ ನಮ್ಮ ಸಹೋದರ ನರಸಿಂಹ ನಾಯಕರು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಜನುಮ ದಿನ ಆಚರಿಸಿ ಕೊಂಡಿರುವುದು ಸಂತೋಷದ ಸಂಗತಿ ಯಾಗಿದೆ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.
ನಗರದ ಹಳೆ ಬಸ್‍ನಿಲ್ದಾಣ ಬಳಿಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಜನುಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಯಾರೆ ಆಗಲಿ ತಮ್ಮ ಜನುಮ ದಿನ ಆಚರಿಸಿಕೊಳ್ಳುವುದು ಮುಖ್ಯವಲ್ಲ.ನಾವು ಎಷ್ಟು ಜನರಿಗೆ ನೆರವಾದೆವು ಎಂಬುದು ಮುಖ್ಯ ಎಂದರು.
ಜನುಮ ದಿನ ಆಚರಿಸಿಕೊಂಡ ಶಿಕ್ಷಕ ನರಸಿಂಹ ನಾಯಕ ಮಾತನಾಡಿ,ನಾನು ಒಬ್ಬ ಶಿಕ್ಷಕನಾಗಿ ಕೊರೊನಾದ ಇಂತಹ ಸಂದರ್ಭದಲ್ಲಿ ಜನುಮ ದಿನ ಆಚರಿಸಿಕೊಳ್ಳಲು ಮನಸ್ಸಿರಲಿಲ್ಲ,ಆದರೆ ಮನೆಯ ಎಲ್ಲರು ನೀಡಿದ ಸಲಹೆ ಮೇರೆಗೆ ನನ್ನ ಜನುಮ ದಿನ ಆಚರಣೆ ಎಂಬುದು ನೆಪವಷ್ಟೆ,ಮುಖ್ಯವಾಗಿ ಬಡ ಕುಟುಂಬದ ಮಕ್ಕಳಿಗೆ ನಮ್ಮಿಂದಾದ ನೆರವು ನೀಡುವುದಾಗಿತ್ತು,ಆದ್ದರಿಂದ ನೂರಾರು ಬಡ ಕುಟುಂಬದ ಮಕ್ಕಳಿಗೆ ಇಂದು ನೋಟಬುಕ್ ಪೆನ್ನು ಸ್ಲೇಟು ಪೆನ್ಸಿಲ್ ಬ್ಯಾಗ್ ಹಾಗು ಮಾಸ್ಕ್ ವಿತರಿಸುವ ಮೂಲಕ ಮಕ್ಕಳ ಕಲಿಕೆಗೆ ನೆರವಾಗಲಾಗುತ್ತಿದೆ ಎಂದರು.
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗು ಮಾಸ್ಕ್ ವಿತರಿಸುವ ಮೂಲಕ ಸದಾಕಾಲ ಮಾಸ್ಕ್ ಧರಿಸುವಂತೆ ಹಾಗೂ ಆಗಾಗ ಕೈಗಳನ್ನು ತೊಳೆದುಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ತಿರುಪತಿ,ಅಪ್ಪಣ್ಣ ಕುಲಕರ್ಣಿ,ದುರ್ಗಪ್ಪ ಹಾಗು ಗೋಪಾಲ ಬಾಗಲಕೋಟೆ,ದೇವರಾಜ,ಅಂಬಯ್ಯ ದೊರೆ,ಗುರು ಪ್ರಸಾದ ನಾಯಕ,ರೂಪಾ ನಾಯಕ ಸೇರಿದಂತೆ ಅನೇಕರಿದ್ದರು.