ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಇಂದಿಗೆ 2ನೇ ವರ್ಷದ ಯಶಸ್ವಿಯ ಪಾದಾರ್ಪಣೆ. ಮೋದಿ ಸರಕಾರವು ದೇಶ ರಕ್ಷಣೆ, ಮಹತ್ವದ ಮಸೂದೆಗಳು ಹಾಗೂ ಯೋಜನೆಗಳು ಜಾರಿಗೆ ತಂದಿದೆ. ದೇಶದ ಕೃಷಿ, ಉದ್ಯಮ, ಮಾಹಿತಿ ತಂತ್ತಜ್ಞಾನ,ರಸ್ತೆ ಸಾರಿಗೆ, ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಸಾಧನೆಗೈದಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಅಭಿನಂದಿಸಿದ್ದಾರೆ
ದೇಶದ ರೈತರ ಅಭಿವೃದ್ಧಿಗೆ, ಕೂಲಿ ಕಾರ್ಮಿಕರ ಏಳಿಗೆಗೆ, ಮಹಿಳೆಯರ ಸಬಲೀಕರಣಕ್ಕೆ, ಯುವಕರ ಕೌಶಲ್ಯಾಭಿವೃದ್ಧಿ ಸೇರಿದಂತೆ ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸಿ,ಎಲ್ಲರ ನಿರೀಕ್ಷೆಯನ್ನು ಮೀರಿದ ಉತ್ತಮ ಆಡಳಿತ ನೀಡುತ್ತಿದೆ ಪ್ರಧಾನಿ ಮೋದಿ ಸರ್ಕಾರ.
ಈ ಕೊರೊನಾ ಸಂಕಷ್ಟದಲ್ಲಿ 20 ಲಕ್ಷ ಕೋಟಿ ರೂಪಾಯಿಗಳ “ಆತ್ಮನಿರ್ಭರ ಭಾರತ” ಐತಿಹಾಸಿಕ ಪ್ಯಾಕೇಜ್ ಘೋಷಣೆಯಿಂದ ದೇಶ ಸ್ವಾವಲಂಬಿಯಾಗಲು ಸಹಕಾರಿಯಾಗಲಿದೆ. “ಸಬ್ ಕಾ ಸಾಥ್ -ಸಬ್ ಕಾ ವಿಕಾಸ್” ಅಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಸಂಪುಟ ಸಹೋದ್ಯೋಗಿಗಳಿಗೆ ಅಂಬಾರಾಯ ಅಷ್ಠಗಿ ಅಭಿನಂದನೆ ಸಲ್ಲಿಸಿದ್ದಾರೆ.