-
ಸಾಜಿದ್ ಅಲಿ
ಕಲಬುರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ರುಮ್ಮುನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸರಗಾಂವ ತಾಂಡಾದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಬಂದ್ ಬಂದ್ ಆಗಿರುವುದರಿಂದ ನಿವಾಸಿಗಳು ಪರದಾಡುವಂತ ಸ್ಥಿತಿ ಚಿಂಚೋಳಿ ಮತ ಕ್ಷೇತ್ರದಲ್ಲಿ ನಡೆಯುತ್ತಿದೆ.
ನೀರು ಮತ್ತು ಕರೆಂಟ್ ಇಲ್ಲದೇ 5 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ, ಜೇಸ್ಕಾಂ ಅಧಿಕಾರಿಗಳು ಹಾರಿಕೆ ಉತ್ತರ ಕೊಡುವ ಮೂಲಕ ಸಮಯ ಕಳೆಯುತ್ತಿದ್ದಾರೆ ರೈತ ಮುಖಂಡ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನಿರ್ಲಕ್ಷ್ಯ ತೋರಿದರೆ. ಸಾಸರಗಾಂವ ತಾಂಡಾದಲ್ಲಿ ಶಬ್ಬಿರ ಪಟೇಲ್ ತೊಟದಲ್ಲಿ ಇರುವ ಬೊರವೇಲ್ ದಿಂದ ಒಂದು ಕಿಲೊಮೀಟರ್ ದೂರದಿಂದ ನೀರು ಹೊತ್ತಿಕೊಂಡು ಬೈಕ ಮೇಲೆ ಕುಡಿಯುವ ಹನಿ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಬೆಜಾವಾಬ್ದಾರಿ ಖಂಡಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರುವ ವರೆಗೆ ಕರ್ನಾಟಕ ಪ್ರಾಂತ ರೈತ ಸಂಘ ಕುಡಿಯುವ ನೀರು ಪೂರೈಕೆಗಾಗಿ ಬಿದಿಗಿಳಿದು ಹೊರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಜು ರಾಠೊಡ, ನಾರಾಯಣ ರಾಠೊಡ, ಸಂತೊಷ ಸಿ ರಾಠೊಡ, ಸೇರಿದಂತೆ ಮುಂತಾದವರು ಇದ್ದರು.