ಯಾದಗಿರಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ವಾಡಗೇರಾ ತಾಲೂಕಿಗಳ ಒಟ್ಟು 41 ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದರು.
ಕೊರೊನಾ ಲಾಕ್‌ಡೌನ್‌ನಿಂದ ಎಲ್ಲಾ ರೈತರು ಹಾಗೂ ಕಾರ್ಮಿಕರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಹಾಗಾಗಿ, ಪ್ರತಿ ರೈತ ಮತ್ತು ಕಾರ್ಮಿಕ ಕುಟುಂಬಕ್ಕೆ 7,500 ರೂ. ಪರಿಹಾರ ನೀಡಬೇಕು. ಎಲ್ಲಾ ಕಾರ್ಮಿಕರಿಗೆ 200 ದಿನಗಳ ಉದ್ಯೋಗ ನೀಡಿ 600 ರೂ ಕೂಲಿ ನೀಡಬೇಕು, ಕಾರ್ಮಿಕ ಕಾಯ್ದೆಯನ್ನು ಮರಳಿ ಜಾರಿ ಮಾಡಬೇಕು, ಉದ್ಯೋಗ ಕಾತ್ರಿ ಯೋಜನೆಗೆ ಸರಿಯಾಗ ಸರ್ವರ್ ವ್ಯವಸ್ಥೆ ಕಲ್ಪಿಸಬೇಕುಎಂದು ಒತ್ತಾಯಿಸಿದರು.
ಇದರ ಜೊತೆಗೆ, ರೈತರು ಮತ್ತು ಕಾರ್ಮಿಕರ ಕುಟುಂಬಗಳಿಗೆ ಆರು ತಿಂಗಳವರೆಗೆ ಉಚಿತ ಪಡಿತರ ನೀಡಬೇಕು, ರೈತರ ಸಾಲಮನ್ನಾ ಮಾಡಬೇಕು, ಸರ್ಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೊದಲ ಆದ್ಯತೆ ಕೊಡಬೇಕು ಎಂದು ತಾಲೂಕು ವಲಯದಲ್ಲಿ ತಹಸೀಲ್ದಾರ್ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ PDO ಯವರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿ ಮನವಿ ಮಾಡಿದರು.