ಕಲಬುರಗಿ: ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ ಯವರು ಮೂರು ಸುತ್ತಿನ ಮತ ಎಣಿಕೆಯಲ್ಲೂ ಹಿನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಖರ್ಗೆ ಪ್ರತಿಸ್ಪರ್ಧಿ ಬಿಜೆಪಿಯ ಡಾ. ಉಮೇಶ ಜಾಧವ ಅವರು 8 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಇದೀಗ ಮೂರನೆ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ಜಾಧವ ಮತ್ತೆ 14 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಸದಾ ರಶ್ ಆಗಿ ಕಂಡು ಬರುತ್ತಿದ್ದ ನಗರದ ಇವಾನ್-ಇಶಾಹಿ ಪ್ರದೇಶದಲ್ಲಿನ ಇವರ ಮನೆ ಲುಂಬಿಣಿಯಲ್ಲಿ ಯಾರೊಬ್ಬರೂ ಒಡಾಡುವುದು ಕಾಣುತ್ತಿಲ್ಲ. ಖರ್ಗೆಯವರು ಮನೆಯಲ್ಲಿಯೇ ಇದ್ದು ಟಿವಿ ವೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸತತ ಗೆಲುವಿನ ನಗೆ ಬೀರುತ್ತಿದ್ದ ಖರ್ಗೆಯವರಿಗೆ ಈ ಬಾರಿ ಸ್ವಲ್ಪ ಆತಂಕವುಂಟಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಇದೇ ಫಲಿತಾಂಶ ಎಂದು ಕೂಡ ಹೇಳಲಾಗುವುದಿಲ್ಲ. ಇನ್ನು ಕೆಲ ತಾಸುಗಳಲ್ಲಿ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.
18,267 ಮತಗಳಿಂದ ಡಾ, ಉಮೇಶ್ ಜಾಧವ್ ಮುನ್ನಡೆ ಸಾಧಿಸಿದ್ದಾರೆ. ಉಮೇಶ್ ಜಾಧವ್ ಗೆ 1,17.147 ಮತಗಳು ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ 98,880 ಮತಗಳು ಬಂದಿವೆ.
ಸದ್ಯದ ಮಾಹಿತ ಪ್ರಕಾರ (11:20Am) 29, 587 ಮತಗಳಿಂದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಮುನ್ನಡೆ ಸಾಧಿಸಿದ್ದಾರೆ. ಜಾಧವ್ ಅವರಿಗೆ 1, 45, 264 ಮತಗಳು ಪಡೆದಿದ್ದರೆ, ಖರ್ಗೆ ಅವರಿಗೆ 1, 15, 677 ಮತಗಳು ಬಂದಿವೆ.