ರಾಯಚೂರು: ಕಾಂಗ್ರೆಸ್ ನ ಭದ್ರಕೋಟೆಯಂದೇ ಕರೆಯಲ್ಪಡುವ ರಾಯಚೂರು ಲೋಕಸಭಾ ಮತಕ್ಷೆತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ತಮ್ಮ ಸಮಿಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿವಿ ನಾಯಕ ಅವರಿಗಿಂತ 69, 379 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಹೀಗಾಗಿ ಅಮರೇಶ್ವರ ನಾಯಕ ಅವರ ಗೆಲವು ಬಹುತೇಕ ಖಚಿತ ಎಂದು ಹೇಳಬಹುದಾಗಿದೆ. ಚಲಾವಣೆಯಾದ 11,15863 ಮತಗಳಲ್ಲಿ 5 ಲಕ್ಷ 7,324 ಮತಗಳು ಎಣಿಕೆಯಾಗಿದ್ದು, ಅಮರೇಶ್ವರ ನಾಯಕ ಅವರಿಗೆ 2,79, 643 ಮತಗಳು ಬಂದಿದ್ದರೆ, ಕಾಂಗ್ರೆಸ್ಸಿನ ಬಿ.ವಿ.ನಾಯಕಗೆ 2,7, 550ಮತಗಳು.ಮತಗಳು ಬಂದಿವೆ. ಹೀಗಾಗಿ ಕಾಂಗ್ರೆಸ್ ನ ಬಿವಿ ನಾಯಕ ಅವರು ಬಹುಷ ಸೋಲಿನ ರುಚಿ ಕಾಣಬಹುದಾಗಿದೆ. (ಸಮಯ 1:30Pm)