ಖರ್ಗೆ ಸೋಲಿಗೆ ಕಾರಣಗಳು ಇವು! ಇರಬಹುದೇ?

6
4963

ಕಲಬುರಗಿ ಲೋಕ ಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಡಾ. ಉಮೇಶ ಜಾಧವ್ ಅವರ ಎದುರು ಅತ್ಯಂತ ಹೀನಾಯ ಸೋಲು ಕಂಡಿದ್ದಾರೆ. ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಕೆಳಗಿನ ಈ ಕಾರಣಗಳು ಇರಬಹುದೇ? ಎಂದು ಯುವ ಬರಹಗಾರ ಡಾ. ಅಶೋಕ ದೊಡ್ಡಮನಿ ಅವರು ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

Contact Your\'s Advertisement; 9902492681
  1. ನೀವು ಹಾಕುವ ಒಂದೊಂದು ಮತ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸುತ್ತೆ ಅನ್ನುವ ಬಿಜೆಪಿ ಸ್ಲೋಗನ್ ಕೆಲಸ ಮಾಡಿದೆ.
  2. ಮತದಾರರನ್ನು ಭಾವನಾತ್ಮಕವಾಗಿ ಕೆರಳಿಸಿದ್ದು ಬಿಜೆಪಿ ಮತವಾಗಿ ಪರಿವರ್ತನೆಯಾಯಿತು.
  3. ಖರ್ಗೆಯವರು ಲಿಂಗಾಯತರ ಮೇಲೆ ಇಟ್ಟಿರುವ ವಿಶ್ವಾಸ ಹುಸಿಯಾಗಿ ಇಡೀ ಲಿಂಗಾಯತ ಸಮುದಾಯ ಖರ್ಗೆಯವರ ವಿರುದ್ಧ ನಿಂತಿರುವುದು.
  4. ಪ್ರಿಯಾಂಕ್ ಖರ್ಗೆಯವರ ಸರ್ವಾಧಿಕಾರಿ ದೋರಣೆಯನ್ನು ಬಿಜೆಪಿ ಎನ್ ಕ್ಶಾಶ್ ಮಾಡಿಕೊಂಡಿತು.
  5. ಕೋಲಿ ಸಮಾಜದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಬಾರದಿರುವುದು.
  6. ದೇಶಕ್ಕಾಗಿ ಮೋದಿˌ ದೇಶದ ರಕ್ಷಣೆ ಮೋದಿ ಮಾತ್ರ ಮಾಡ್ತಾರೆ ಎಂದು ಬಿಜೆಪಿ ಯುವಕರನ್ನುˌ ಹುರಿದುಂಬಿಸಿ ಮತ ಪಡೆದಿದ್ದು.
  7. ಬಾಬುರಾವ್ ಚಿಂಚನಸೂರ್ˌ ಮಾಲಿಕಯ್ಯ ಗುತ್ತೇದಾರ್ˌ ಮಲಕರೆಡ್ಡಿ ಕಾಂಗ್ರೆಸ್ ದಿಂದ ಹೊರಹೋಗಿದ್ದು ಖರ್ಗೆ ಸೋಲಿಗೆ ಕಾರಣವಾಯಿತು.
  8. ಕಲಬುರಗಿಯನ್ನು ಕೇಂದ್ರದ ಬಿಜೆಪಿ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದುˌ ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ RSS ಟೀಂ ಬಿಜೆಪಿ ಪರ ಕೆಲಸ ಮಾಡಿತ್ತು.
  9. ಅಸ್ಪ್ರಶ್ಶರನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಮೇಲ್ವರ್ಗದ ಮತದಾರರ ಕುತಂತ್ರ ಒಳಗೊಳಗೆ ಕೆಲಸ ಮಾಡಿದ್ದು.
  10. ಕಾಂಗ್ರೆಸ್ ಮುಖಂಡರು ಬರೀ ರಸ್ತೆಯ ಮೇಲೆ ತಿರುಗಾಡಿ ಖರ್ಗೆಯವರಿಗೆ ಮಾತ್ರ ಪೋಸ್ ಕೊಟ್ಟುˌ ಯಾರಿಗೂ ಮತ ಹಾಕಲು ಹೇಳದಿರುವುದು.
  11. ಜೇವರ್ಗಿ ಶಾಸಕ ಡಾ.ಅಜಯಸಿಂಗ್ ತಮ್ಮ ಕ್ಷೇತ್ರದಲ್ಲಿ 24 ಸಾವಿರ ಬಿಜೆಪಿ ಲೀಡ್ ಗೆ ಸಹಕರಿಸಿದ್ದು. ಅಫಜಲಪೂರ್ ಶಾಸಕ ಎಂವೈ ಪಾಟೀಲ್ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡದಿರುವುದು.
  12. ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿಯವರ ಜೊತೆ ಸೇರಿ ಹಣ ಪಡೆದುಕೊಂಡಿದ್ದು.
  13. ಬಂಜಾರ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಾರದಿರುವುದು.
  14. ಕಲಬುರಗಿ ಕ್ಷೇತ್ರಕ್ಕೆ ಖರ್ಗೆಯವರೇ ನೋಡಿಕೊಳ್ಳಲಿ ಎಂದು ಹೈಕಮಾಂಡ ಮತ್ತು ರಾಜ್ಶ ನಾಯಕರು ನಿರ್ಲಕ್ಷ್ಯ ಮಾಡಿರುವುದು.
  15. EVM ಮಶಿನ್ ತಿರುಚಿರುವ ಸಾಧ್ಶತೆ ಇರುವುದರಿಂದ ಖರ್ಗೆಗೆ ಸೋಲಾಗಿರಬಹುದು.
  16. ಬೆಂಗಳೂರುˌ ಮುಂಬೈˌ ಪೂನಾ ಹೈದ್ರಾಬಾದ್ ನಗರಕ್ಕೆ ವಲಸೆ ಹೋದ ಪಕ್ಕಾ ಕಾಂಗ್ರೆಸ್ ಬೆಂಬಲಿಸುವ ಮತದಾರರನ್ನು ಕರೆಸದೆ ಇರೋದು.
  17. ಖರ್ಗೆಯವರು ಮಾಡಿದ ಕೆಲಸಗಳನ್ನು ಪ್ರಚಾರ ಮಾಡಲು ವಿಫಲವಾಗಿದ್ದು.
  18. ಕಾಂಗ್ರೆಸ್ ಮುಖಂಡರು ಶೋ ಪುಟಪ್ ಕೊಟ್ಟರೆ ವಿನಹ ಮತದಾರರ ಬಳಿ ಹೋಗಲಿಲ್ಲ.
  19. ಗುರುಮಿಠಕಲ್ ದಲ್ಲಿರುವ ಶಾಸಕ ನಾಗನಗೌಡ ಕಂದಕೂರ್ ಖರ್ಗೆ ಪರ ಕೆಲಸ ಮಾಡದೆ ಇರೋದು.
  20. ಡಾ.ಅಂಬೇಡ್ಕರ್ ಅಭಿವ್ರದ್ಧಿ ನಿಗಮದ ಎಲ್ಲ ಯೋಜನೆಗಳು ಸಚಿವ ಪ್ರಿಯಾಂಕ್ ಖರ್ಗೆ ಮೊಟಕುಗೊಳಿಸಿದ್ದಕ್ಕೆ ಪರಿಶಿಷ್ಟರು ಸಿಟ್ಟಿಗೆದ್ದಿದ್ದು.
  21. ಸಿದ್ರಾಮಯ್ಶನವರ ಅಹಂಕಾರದ ದೋರಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಶಾಮೇಜ್ ಹೆಚ್ಚಾಯಿತು. ಇದು ಖರ್ಗೆಯವರಿಗೂ ತಟ್ಟಿತು. ಹೀಗೆ ಹಲವು ಕಾರಣಗಳಿಂದ ಖರ್ಗೆಯವರಿಗೆ ಸೋಲಾಗಲು ಕಾರಣವಾಗಿದೆ.

ಡಾ.ಅಶೋಕ್ ದೊಡ್ಮನಿˌ ಜೇವರ್ಗಿˌ (ಎಂ.ಎ Phd)

6 ಕಾಮೆಂಟ್ಗಳನ್ನು

  1. ಕಾಂಗ್ರೆಸ್ ಪಕ್ಷದ ಮುಖಂಡರು , ಕಾರ್ಯಕರ್ತರು ಕೇವಲ ಖರ್ಗೆಯವರ ಜೊತೆಗೆ ಫೋಟೋ ಹೊಡೆದು ಕೊಳ್ಳುವದರಲ್ಲಿ ಸುರರು … ತಲೆಯಲ್ಲಿ ಮುರುಕಾಸಿನ ಬುದ್ದಿ ಇಲ್ಲಾ , ಸೈದ್ಧಾಂತಿಕ ಬದ್ದಂತೆ ಮೊದಲೇ ಇಲ್ಲಾ…

  2. ಬಹುಶ: ಕರ್ಗೆಯವರು ಸೋಲಲು ಕಾರಣ ಇವೂ ಇರಬಹುದು.
    1) ಎಡಗೈ ಸಮುಧಾಯವನ್ನು ನಿರ್ಲಕ್ಷಿಸಿದ್ದು.
    2) ಎಡಗೈ ಸಮುಧಾಯದವರಿಗೆ ರಾಜಕೀಯದಲ್ಲಿ ಸರಿಯಾಗಿ ಅವಕಾಶ ಹಾಗೂ ಉನ್ನತ ಸ್ಥಾನಮಾನಗಳನ್ನು ಕೊಡದೇ ಇರುವುದು
    3) ಸದಾಶಿವ ಆಯೋಗ ಜಾರಿ ವಿಚಾರದಲ್ಲಿ ತೆರೆಮರೆಯ ಹಿಂದೆ ನಿರ್ಲಕ್ಷ ತೋರಿದ್ದು.
    4) ಹೊಸ ಅಭ್ಯರ್ಥಿಗಳಿಗೆ ರಾಜಕೀಯದಲ್ಲಿ ಅವಕಾಶ ನೀಡದಿರುವುದು.
    5) ಇವರು ಕೇಂದ್ರದಲ್ಲಿ ಸರಿಯಾದ ರೀತಿಯಲ್ಲಿ ಚರ್ಚಿಸಿ ಅಭಿವೃದ್ಧಿ ಯ ಅನುಧಾನಗಳನ್ನು ಆಯಾ ಕ್ಷೇತ್ರಗಳಿಗೆ. ತಲುಪಿಸದೇ ಇರುವುದು

  3. ಹಿಂದುಳಿದ ವರ್ಗಗಳ ಮತಗಳನ್ನು ಬಿಜೆಪಿ ಪಕ್ಷ ಆಮಿಷ ಒಡ್ಡಿ ‌ಪಡೆಯಿತು .ಇನ್ನೂ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಇವೆ ಅಷ್ಟು ಬಂದಿವೆ. ೨೦%/ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಇವೆ ಸರ

  4. ಹಿಂದುಳಿದ ವರ್ಗಗಳ ಮತಗಳನ್ನು ಬಿಜೆಪಿ ಪಕ್ಷ ಆಮಿಷ ಒಡ್ಡಿ ‌ಪಡೆಯಿತು .ಇನ್ನೂ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಇವೆ ಅಷ್ಟು ಬಂದಿವೆ. ೨೦%/ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಇವೆ ಸರ

  5. ಹಿಂದುಳಿದ ವರ್ಗಗಳ ಮತಗಳನ್ನು ಬಿಜೆಪಿ ಪಕ್ಷ ಆಮಿಷ ಒಡ್ಡಿ ‌ಪಡೆಯಿತು .ಇನ್ನೂ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಇವೆ ಅಷ್ಟು ಬಂದಿವೆ. ೨೦%/ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಇವೆ ಸರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here