ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಸೋತಿರುವುದಕ್ಕೆ ಬೇಸರವಾಗಿದೆ. ನನಗೆ ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಸಂಸದ ಡಾ.ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದ ತಮ್ಮ ನಿವಾಸ ಲುಂಬಿಣಿಯಲ್ಲಿ ಮಾತನಾಡಿದ ಅವರುˌ ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಹಜ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣಗಳೇನು ಎಂಬುವುದನ್ನು ದೆಹಲಿಯಲ್ಲಿ ಪಕ್ಷದ ವರಿಷ್ಠರು ಸಭೆ ಸೇರಿ ಚರ್ಚಿಸುತ್ತೇವೆ ಎಂದರು.
ಜನತಾ ಜರ್ಧನನ ತೀರ್ಮಾನಕ್ಕೆ ತಲೆಬಾಗುತ್ತೇನೆ. ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳಲು ಸಿದ್ಧರಾಗಬೇಕು. ಮೊದಲನಿಂದಲು ನಮಗೆ ಇವಿಎಂ ಬಗ್ಗೆ ಆರೋಪವಿದೆ. ಇದೀಗ ಅದರ ಬಗ್ಗೆ ಹೇಳಿದರೆ ಕುಂಟು ನೆಪಾ ಹೇಳಿದಂತಾಗುತ್ತದೆ. ಜನರ ತೀರ್ಪನ್ನು ಸ್ವೀಕಾರ ಮಾಡಬೇಕು ಇವಿಎಂ ಬಗ್ಗೆ ಏನಿದೆ ಅನ್ನುವುದನ್ನು ಎಲ್ಲಾ ನಯಕರು ಸೇರಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತಾರೆ. ಈ ಫಲಿತಾಂಶ ಸಮ್ಮೀಶ್ರ ಸರಕಾರದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದರು.
ನಮ್ಮ ತತ್ವ ಸಿದ್ಧಾಂತಗಳು ಯಾಕೆ ಕೆಲಸ ಮಾಡಲಿಲ್ಲ ಮತ್ತು ಮುಂದೆ ಪಕ್ಷವನ್ನು ಬಲಪಡಿಸಲು ಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ವ್ಶಕ್ತವಾಗಲಿದೆ ಎಂದರು. ಅಲ್ಲದೆ ನನ್ನ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಚಿವರುˌ ಮಾಜಿ ಸಚಿವರುˌ ಶಾಸಕರುˌ ಮಾಜಿ ಶಾಸಕರುˌಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಖರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತೆ ಸಿಬಿಎಂ ಬಗ್ಗೆ ಕುಂಟು ನೆಪ ಹೇಳಬೇಡಿ