ಕಲಬುರಗಿ: ಕೋವಿಡ್-19 ವೈರಸ್ ಪ್ರಕರಣಗಳು ಕಲಬುರಗಿ ಜಿಲ್ಲೆಯನ್ನು ಬಿಚ್ಚಿ ಬಿಳಿಸುವಂತೆ ಮಾಡಿದ್ದು, ಪಾಜಿಟಿವ್ ಕೇಸ್ ಗಳು ಎರಡು ಸಾವಿರ ಗಡಿ ಸಮಿಪಿಸಿದೆ. ಇಲ್ಲಿನ ಕೇಂದ್ರ ಕಾರಗೃಹದ 10 ಖೈದಿಗಳಲ್ಲಿ ಸೋಂಕು ಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕೊರೊನಾ ಮಹಾಮಾರಿ ರಾಜಕಾರಣಿಗಳು, ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂದ ಎಲ್ಲ ವಲಯದಲ್ಲಿ ಹರಡಿದ್ದು, ಈಗ ವೈರಸ್ ಜೈಲುಗಳಲಿರುವ ಖೈದಿಗಳಿಗು ತಟ್ಟಿರುವ ಮೂಲಕ ತನ್ನ ಅಟ್ಟಹಾಸ ಮುಂದುವರೆಸಿದೆ. ಮಾರ್ಚ್ ತಿಂಗಳ ಸಮಿಪ ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ಕೇಂದ್ರ ಕಾರಗೃಹದ ಸುಮಾರು 70ಕ್ಕೂ ಹೆಚ್ಚು ಖೈದಿಗಳನ್ನು ಪೆರೋಲ್ ಮೇಲೆ ಬಿಡಲಾಗಿತ್ತು.
ಪೆರೋಲ್ ಮುಗಿಸಿ ವಾಪಸ್ ಮರಳಿದ ಖೈದಿಗಳಲ್ಲಿ 10 ಜನ ವಿಚಾರಣಾಧೀನ ಖೈದಿಗಳಿಗೆ ಕೊರೊನಾ ಪಾಜಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.