ಹಾಸನ: ಅಂಗೈಯ ಮೇಲೆ ಆತ್ಮಹತ್ಯೆಗೆ ಕಾರಣ ಬರೆದು ಮಹಿಳೆಯೊಬ್ಬರು ವಿಷ ಸೆವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಜೀಕನಹಳ್ಳಿಯ ವೀಣಾ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸ್ವ ಗ್ರಾಮದ ಲೋಕೇಶ್ ಕುಟುಂಬಕ್ಕೆ ಮೋಸ ಮಾಡಿ ಎರಡು ಎಕರೆ ಭೂಮಿಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ವೀಣಾ ತನ್ನ ಅಂಗೈ ಕೈಮೇಲೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀಣಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲೋಕೇಶ್ ತಾನು ಪತ್ರಕರ್ತ ತನಗೆ ಏನೂ ಮಾಡಲು ಆಗಲ್ಲ ಎಂದು ಬೆದರಿಸುತ್ತಿದ್ದನು ಎಂದು ವೀಣಾ ಆರೋಪಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಬರೆದಿಟ್ಟು ಮಹಿಳೆ ಸಾವಿಗೆ ಶರಣಾಗಿದ್ದಾರೆ. ಪ್ರಕರಣ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.