ಕಲಬುರಗಿ: ನಗರದ ಬಸವ ಮಂಟಪದಲ್ಲಿಂದು ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ ಕಾರ್ಯಕ್ರಮದಲ್ಲಿ ಹತ್ತನೇ ಪರೀಕ್ಷೇಯ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹತ್ತರ ಕನ್ನಡಕೆ… ಗುಣಾಗ್ರಣಿ ” ಎಂಬ ‘ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದನ್ನು ಜರುಗಿತು.
ಶ್ರೀನಿವಾಸ ಸರಡಗಿಯ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಜಿಪಂನ ಸಿಇಓ ಡಾ.ರಾಜಾ ಪಿ., ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಶ್ರಣ ಚಿಂತಕರಾದ ಆರ್.ಜಿ.ಶಟಗಾರ, ಮಲ್ಲಿನಾಥ ಪಾಟೀಲ ಕಾಳಗಿ, ವಿದ್ಯಾಸಾಗರ ದೇಶಮುಖ, ರಾಜೇಶ ಗುತ್ತೇದಾರ, ಕಲ್ಯಾಣಪ್ಪ ಪಾಟೀಲ ಮಳಖೇಡ, ಡಾ.ವಾಸುದೇವ ಸೇಡಂ, ವಾಣಿಶ್ರೀ ಸಗರಕರ್, ಮಮತಾ ಗಂಗಸಿರಿ, ಬಿ.ಎಸ್.ಮಾಲಿಪಾಟೀಲ, ಪ್ರಭುಲಿಂಗ ಮೂಲಗೆ, ಪರಮೇಶ್ವರ ಶಟಕಾರ, ರವೀಂದ್ರಕುಮಾರ ಭಂಟನಳ್ಳಿ, ಸವಿತಾ ಪಾಟೀಲ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ಎಸ್.ಎಂ.ಪಟ್ಟಣಕರ್, ಪ್ರಸನ್ನ ವಾಂಜರಖೇಡೆ, ನಾಗೇಂದ್ರಪ್ಪ ಮಾಡ್ಯಾಳೆ, ಆರ್.ಹೆಚ್.ಪಾಟೀಲ, ಶಿವಕುಮಾರ ಸಿ.ಎಚ್. ಜಗದೀಶ ಮರಪಳ್ಳಿ, ಮನೋಹರ ಪೊದ್ದಾರ, ಲಗುಮಣ್ಣಾ ಕರಗುಪ್ಪಿ, ಸೇವಂತಾ ಪ್ರೇಮಸಿಂಗ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.