ಅದೊಂದು ದಿನ ಪಕ್ಕದ ಮನೆಯವರು ಫೋಟೋ ತಗೆಸಿಕೊಂಡು ಬಂದಿದ್ದರೂ ಅದನ್ನು ನೋಡಿ ನಾವು ಫೋಟೋ ತಗಿಸಿಕೊಳ್ಳಬೇಕು ಅಂದು ಮನೆಯಲ್ಲಿ ನಾನು, ಅಣ್ಣಾ, ಅಕ್ಕಾ ಹಠ ಮಾಡಿದೆವು. ಅದರಿಂದ ಮನೆಯವರು ಬೈಯ್ದರು. ಆದರೂ ನಾವು ಕೇಳಿದ ಹಠ ಮುಂದುವರಿಸಿದೆವು. ಮನೆಯವರು ಕೋಪಗೊಂಡ ನಮ್ಮ ಮೂರು ಜನಕ್ಕೆ ಹೊಡೆದು ಬಿಟ್ಟರು. ಸಂಜೆಯ ವರೆಗೂ ಅಳುತ್ತಲೇ ಇದ್ದೇವು.
ಆದರೂ ಮನೆಯವರು ಜಪ್ಪಯ್ಯ ಅನ್ನಲಿಲ್ಲ. ಊಟ ಕೂಡಾ ಮಾಡದೆ ಅಳುತ್ತೆಲೆ ಇರುವುದನ್ನು ನೋಡಿ ಕೊನೆಗೆ ಫೋಟೋ ತಗಿಸಿಕೊಂಡು ಬರಲು ೧೦ ರೂಪಾಯಿ ಕೊಟ್ಟರು. ಅದನ್ನು ತೆಗೆದುಕೊಂಡು ಹೋದೆವು. ಆಗ ಶಹಾಪುರದಲ್ಲಿ ಒಂದೇ ಫೋಟೋ ಸ್ಟುಡಿಯೋ ಇತ್ತು. ಅದು ಮಹಾಲಿಂಗಪ್ಪ ನೆಲೋಗಿ ಅವರ ವಿಜಯ ಫೋಟೋ ಸ್ಟುಡಿಯೋ. ಅದರ ಹೆಸರು ಅದೊಂದು ಚಿಕ್ಕ ಸ್ಟುಡಿಯೋ. ಸ್ಥಾವರಮಠ ಹತ್ತಿರ ಸ್ಟುಡಿಯೋ ಇತ್ತು.
ಮಹಾಲಿಂಗಪ್ಪ ನೆಲೋಗಿ ಅವರು ಫೋಟೋ ಏನೂ ತಗೆಸಿಕೊಂಡೆವು. ಆದರೆ ಮಹಾಲಿಂಗಪ್ಪ ನೆಲೋಗಿಯವರು ಇನ್ನೂ ಒಂದು ವಾರ ಬಿಟ್ಟು ಬನ್ನಿ ಅಂದರು. ಮತ್ತೆ ನಮ್ಮ ಕಣ್ಣಂಚಿನಲ್ಲಿ ನೀರು ಬರಲು ಪ್ರಾರಂಭವಾಯಿತು. ಯಾರೆಂದರೆ ಆಗಿನ ಕಾಲದಲ್ಲಿ ರೀಲ್ ಕ್ಯಾಮರಾ ರೀಲ್ ಮುಗಿಯುವವರೆಗೂ ಫೋಟೋ ತೊಳೆದು ಕೊಡುತ್ತಿರಲಿಲ್ಲ.
ಕೊನೆಗೂ ಸ್ವಪ್ಪೆ ಮೊರೆ ಮಾಡಿಕೊಂಡು ಮನೆಗೆ ಬಂದೆವು. ಮನೆಯವರು ಇವಾಗಲಾದರೂ ಊಟ ಮಾಡಿ ಎಂದು ಊಟ ಮಾಡಿಸಿದರು. ನಮ್ಮ ಮನಸಿನಲ್ಲಿ ಆಗಲೇ ಗೊಂದಲ ಶುರುವಾಗಿತ್ತು. ಫೋಟೋ ಯಾವಾಗ ಕೊಡುತ್ತಾನೊ ಅಥವಾ ಇಲ್ಲವೊ ಫೋಟೋ ಕೊಟ್ಟು ಅದು ಹೇಗೆ ಬಂದಿರುತ್ತದೋ ಎಂಬ ಕುತೂಹಲ ಕೆರಳಿಸಿತು. ಕೊನೆಗೆ ಒಂದು ವಾರ ಕಳೆದೆ ಹೋಗಿತ್ತು. ಚೀಟಿ ತೆಗೆದುಕೊಂಡು ಹೋದೆವು. ಆದರೆ ಮಧ್ಯಾಹ್ನ ಬನ್ನಿ ಅಂದರು. ಮತ್ತೆ ಮನಸಿನಲ್ಲಿ ಗೊಂದಲ ಮತ್ತೆ ಮಧ್ಯಾಹ್ನ ಹೋದೆವು. ಕೊನೆಗೂ ನಮ್ಮ ಕೈಸೇರಿತು ಫೋಟೋ. ಆಗ ಆನಂದಕ್ಕೆ ಪಾರವೆ ಇಲ್ಲ ಅಷ್ಟೊಂದು ಸಂತೋಷವಾಗಿತ್ತು. ಮನೆಗೆ ಬಂದು ಮನೆಯವರಿಗೆಲ್ಲಾ ತೋರಿಸಿ ಸಂತೋಷ ಪಟ್ಟೆವು. ನೆರೆ ಹೊರೆಯವಿರಿಗೂ ಕೂಡಾ ಫೋಟೋ ತಗೆದು ಕೊಂಡು ಹೋಗಿ ಎಲ್ಲರಿಗೂ ತೋರಿಸುತ್ತಾ ಸಂಭ್ರಮಿಸಿದೆವು.
ಅದೊಂದು ಅವಿಸ್ಮರಣೀಯ ಕ್ಷಣ ನನಗೆ, ಅಣ್ಣನಿಗೆ ಮತ್ತು ಅಕ್ಕಳಿಗೆ ಆ ಘಳಿಗೆ ನೆನಪು ಮಾಡಿಕೊಂಡರೆ ಇಂದಿಗೂ ಮೈ ರೋಮಾಚನ ಗೊಳುತ್ತದೆ. ಮಹಾಲಿಂಗಪ್ಪ ನೆಲೋಗಿ ಅವರು ಅದ್ಬುತ ಛಾಯಾಗ್ರಾಹಕರು. ಅವರು ಜೀವಿತಾವಧಿ ವರೆಗೂ ತಮ್ಮ ಛಾಯಾಗ್ರಾಹಕ ವೃತ್ತಿ ಬಿಡಲ್ಲಿಲ್ಲ ಎಷ್ಟೇ ಕಷ್ಟಗಳು ಬಂದರು ಈಗಿನ ಡಿಜಿಟಲ್ ಫೋಟೋ ಗ್ರಾಫೀ ಅಬ್ಬರದಲ್ಲಿ ಅವರು ತಮ್ಮದೆ ಆದ ಗ್ರಾಹಕರನ್ನು ಹೊಂದಿದ್ದರು. ಕೊನೆಗೆ ಕಾಲನ ಕರೆಗೆ ಓಗೊಟ್ಟು ಕೆಲವು ತಿಂಗಳ ಹಿಂದೆ ಲಿಂಗಕ್ಕೆರಾದರು ಅದೊಂದು ನೋವಿನ ಸಂಗತಿ. ಆದರೆ ಅವರು ಅಂದು ತಗೆದ ಫೋಟೋ ಆಗೆ ಇದೆ. ಅವರು ಮಾತ್ರ ಇಲ್ಲ. ಹಳೆಯ ಫೋಟೋ ಗಳು ನೋಡಿದಾಗಲೆಲ್ಲ ಅವರು ನೆನಪಿಗೆ ಬರುತ್ತಾರೆ.
-ಸಾಯಿಕುಮಾರ ಇಜೇರಿ, ಶಹಾಪುರ