ಶಹಾಬಾದ: ಕೇಂದ್ರ ಸರಕಾರ ಲಾಕ್ ಡೌನ್ ಘೋಷಣೆ ಮಾಡಿ ಕೋವಿಡ್-19 ರೋಗವನ್ನು ತಡೆಗಟ್ಟುತ್ತೆವೆಂದು ಹೇಳಿದ ಸರಕಾರವು ಇಂದು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂದು ಹೇಳಿ ಕೈ ಚೆಲ್ಲುತ್ತಿರುವುದು ಬಹಳ ನೋವಿನ ಸಂಗತಿ ಎಂದು ಎಸ್ ಯುಸಿಐಸಿ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್ ಇಬ್ರಾಹಿಂಪೂರ ಹೇಳಿದರು.
ಅವರು ಬುಧವಾರ ಎಸಯುಸಿಐ ಪಕ್ಷದ ವತಿಯಿಂದ ಕೋವಿಡ್ 19ರ ಹಿನ್ನೆಲೆಯಲ್ಲಿ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸಲು ಒತ್ತಾಯಿಸಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರ ಲಾಕ್ಡೌನ್ ಮಾಡಿ ಸಾರ್ವಜನಿಕರು ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲ ಸರಕಾರ ನಿಮ್ಮೊಂದಿಗಿದೆ.ನಿಮ್ಮ ಆರೋಗ್ಯ ಕಾಪಾಡುವುದು ನಮ್ಮ ಹೊಣೆ ಎಂದೆಲ್ಲ ಹೇಳಿದ ಅವರು ತಮ್ಮ ಹೊಣೆಗಾರಿಕೆಯನ್ನು ಮರೆತು ಮಾತನಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸರಕಾರ ಹಿಂದೆಂದೂ ನೋಡಿಲ್ಲ ಎಂದು ಕಿಡಿಕಾರಿದರು.
ಕೂಡಲೇ ಸರಕಾರವು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಬಡ ಜನರ ಆರೋಗ್ಯ ಕಾಪಾಡಬೇಕೆಂದು ಒತ್ತಾಯಿಸಿದರಲ್ಲದೇ,ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು.ಕೋವಿಡ್ ಸೊಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಸಮಸ್ಯೆಗಳನ್ನು ಪರಿಹರಿಸುವ ಅಧಿಕಾರವುಳ್ಳ ಉನ್ನತ ಸಮಿತಿ ರಚಿಸಬೇಕು. ಇತರ ಗಂಭೀರ ಖಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ಅಡ್ಡಿಯಾಗದಂತೆ ಒಂದು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಿಯ ಸಮಿತಿ ಕಾರ್ಯದರ್ಶಿ ಗಣಪತರಾವ ಮಾನೆ ಮಾತನಾಡಿದರು.ರಾಘವೇಂದ್ರ.ಎಮ್.ಜಿ, ಗುಂಡಮ್ಮ ಮಡಿವಾಳ,ಜಗನ್ನಾಥ.ಎಸ್.ಹೆಚ್, ಸಿದ್ದು ಚೌಧರಿ, ಪ್ರವೀಣ ಬಣಮೀಕರ್, ತುಳಜರಾಮ.ಎನ್.ಕೆ,ರಮೇಶ ದೇವಕರ್,ಮಹಾದೇವಿ ಮಾನೆ, ಸವಿತಾ, ಪ್ರವೀಣ್,ತಿಮ್ಮಯ್ಯ.ಬಿ.ಮಾನೆ, ನೀಲಕಂಠ.ಎಮ್. ಹುಲಿ,ಭಾಗವಹಿಸಿದ್ದರು.