ಕರೊನಾ ಭಯಬೇಡ ಕರಪತ್ರ ಬಿಡುಗಡೆ

0
41

ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ನಾಗರಿಕ ಸಮಿತಿ ಹಾಗೂ ಕಲಬುರಗಿ ಮಹಾನಗರ ಸೇವಾ ಸಮಿತಿ ವತಿಯಿಂದ ನಗರದ ವಿಕಾಸ ಅಕಾಡೆಮಿ ಕಚೇರಿಯಲ್ಲಿ ಶನಿವಾರ ಕೊರೊನಾ ಭಯ ಬೇಡ ಮುನ್ನೆಚ್ಚರಿಕೆ ಅಗತ್ಯ ಎನ್ನುವ ಕರಪತ್ರವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಕಲಬುರಗಿ ಮಹಾನಗರ ನಾಗರಿಕ ಸಮಿತಿ ಹಾಗೂ ಕಲಬುರಗಿ ಮಹಾನಗರ ಸೇವಾ ಸಮಿತಿಯು ನಗರದ ಜನರ ಆರೋಗ್ಯ ರಕ್ಷಣೆಗಾಗಿ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಕೊರೊನಾ ಹೋಗಲಾಡಿಸಲು ಯೋಗ, ಪ್ರಾಣಯಾಮ, ಧ್ಯಾನ ಮಾಡಬೇಕು. ಬಿಸಿ ನೀರು ಸೇವಿಸಬೇಕು. ಒಣ ಶುಂಟಿ, ತುಳಸಿ, ಬೆಳ್ಳುಳ್ಳಿ ಸೇವಿಸುವುದರಿಂದ ಈ ರೋಗ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯ ಶಾಂತರೆಡ್ಡಿ, ಕಲಬುರಗಿ ಮಹಾನಗರ ನಾಗರಿಕ ಸಮಿತಿ ಸಹ ಕಾರ್ಯದರ್ಶಿ ಚಂದ್ರಶೇಖರ ತಳ್ಳಳ್ಳಿ, ಕಲಬುರಗಿ ಮಹಾನಗರ ಸೇವಾ ಸಮಿತಿ ಕಾರ್ಯದರ್ಶಿ ವಿಜಯಕುಮಾರ ಸಾತನೂರಕರ್, ಸದಸ್ಯರಾದ ರಮೇಶ ಪಾಟೀಲ, ಶಾಂತರೆಡ್ಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here