ಶಹಾಬಾದ: ರಾಜ್ಯ ಸರಕಾರ ಕೋವಿಡ್-19 ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಗಲ್ಲಿಗಳಲ್ಲಿ ಕೂಡಿಸಬಾರದೆಂದು ಆದೇಶ ಮಾಡಿದ್ದು, ಅದರ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಡಿವಾಯ್ಎಸ್ ಪಿ ವೆಂಕನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ನಗರದ ಜಗದಂಬಾ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಚತುರ್ಥಿ ನಿಮಿತ್ತ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಅದನ್ನು ತಡೆಗಟ್ಟಲು ಈ ನಿರ್ಧಾರ ಕೈಗೊಂಡಿದ್ದಾರೆ ಹೊರತು, ಗಣೇಶನನ್ನು ಪೂಜಿಸಬೇಡಿ, ಕೂಡಿಸಬೇಡಿ ಎಂದು ಎಲ್ಲೂ ಹೇಳಿಲ್ಲ.ನಿಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಕೂಡಿಸಿ.ಆದರೆ ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಶ್ರದ್ಧೆಯಿಂದ ಹಬ್ಬವನ್ನು ಆಚರಿಸಿ ಸಹಕರಿಸಬೇಕೆಂದು ಹೇಳಿದರು.
ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ರಾಜ್ಯದಲ್ಲಿಯೇ ಕೊರೊನಾಗೆ ಬಲಿಯಾಗಿದ್ದು ಕಲಬುರಗಿ ಜಿಲ್ಲೆ.ನಂತರ ಶಹಾಬಾದನಲ್ಲಿ ಸೊಂಕಿತ ವ್ಯಕ್ತಿಗಳು ಪತ್ತೆಯದಾವು.ಸದ್ಯ 185 ಪ್ರಕರಣಗಳು ಬರಳಿಗೆ ಬಂದಿವೆ.8 ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ. ಆದ್ದರಿಂದ ಈ ಗಂಭೀರತೆಯನ್ನು ಅರಿತುಕೊಂಡು ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ದೇವಸ್ಥಾನ ಅಥವಾ ಮನೆಯಲ್ಲಿ ಪ್ರತಿಷ್ಠಾಪಿಸಿ. ನದಿ, ಹಳ್ಳಿ, ಬಾವಿಗಳಲ್ಲಿ ವಿಸರ್ಜನೆ ಮಾಡದೇ, ಮನೆಯ ಆವರಣದಲ್ಲಿ ವಿಸರ್ಜನೆ ಮಾಡಬೇಕು.ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ಉಲ್ಲಂಗಿಸಬಾರದು.ಒಂದು ವೇಳೆ ಉಲ್ಲಂಘಿಸಿದರೇ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪಿಐ ಅಮರೇಶ.ಬಿ ಮಾತನಾಡಿ, ಎರಡು ಅಡಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ.ವಿಸರ್ಜನೆ ಸಮಯದಲ್ಲಿ ಮೆರವಣಿಗೆಗೆ ಅವಕಾಶವಿಲ್ಲ.ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪೌರಾಯುಕ್ತ ಕೆ.ಗುರಲಿಂಗಪ್ಪ,ಮಾತನಾಡಿ,ಸಮುದಾಯಕ್ಕೆ ಕೊರೊನಾ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲರದ್ದು.ಆದ್ದರಿಂದ ಕಡ್ಡಾಯವಾಗಿ ಕಾನೂನಿನ ಆದೇಶ ಪಾಲನೆ ಮಾಡೋಣ ಎಂದರು.ತಾಪಂ ಇಓ ಲಕ್ಷ್ಮಣ ಶೃಂಗೇರಿ,ಪಿಎಸ್ಐ ತಿರುಮಲೇಶ ವೇದಿಕೆಯ ಮೇಲಿದ್ದರು.
ಗಣ್ಯರಾದ ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ, ಅರುಣ ಪಟ್ಟಣಕರ್,ಗಿರೀಶ ಕಂಬಾನೂರ,ಭೀಮರಾವ ಸಾಲುಂಕೆ,ಸುಭಾಷ ಜಾಪೂರ,ಬಸವರಾಜ ಮದ್ರಿಕಿ, ನಾಗಣ್ಣ ರಾಂಪೂರೆ, ಅಣ್ಣಪ್ಪ ದಸ್ತಾಪೂರ, ನಾಗಣ್ಣ ರಾಂಪೂರೆ, ಶರಣು ಪಗಲಾಪೂರ, ಭೀಮಯ್ಯ ಗುತ್ತೆದಾರ,ಸಂಜಯ ಸೂಡಿ, ಗಿರಿರಾಜ ಪವಾರ ಇತರರು ಇದ್ದರು.