ನೂತನವಾಗಿ ಮತ್ತೆ ಆಯ್ಕೆಯಾದ ಕೇಂದ್ರ ಸರಕಾರದಲ್ಲಿ 371(ಜೆ) ಹೆಚ್ಚು ಒತ್ತುನೀಡಲು ಆಗ್ರಹ

0
123

ಕಲಬುರಗಿ: ದೇಶದಲ್ಲಿ ಬಿಜೆಪಿ ಭಾರಿ ಬಹುಮತದಿಂದ ಆಯ್ಕೆ ಮಾಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನ ಮಂತ್ರಿಯಾಗಿ ಜನರು ಆಯ್ಕೆ ಮಾಡಿದ್ದು, ರಾಜ್ಯದಲ್ಲಿಯು ಬಿಜೆಪಿ ಹೆಚ್ಚಿನ ಸ್ಥಾನ ನೀಡಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ನೂತನ ಸರಕಾರ ಹೈ.ಕ ಭಾಗ 371(ಜೆ) ಅಡಿಯಲ್ಲಿ ಈ ಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅದ್ಯಕ್ಷ ಲಕ್ಮಣ ದಸ್ತಿ ಅವರು ಆಗ್ರಹಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈ.ಕ ಭಾಗದ ನೆನಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳಿ, 371(ಜೆ) ಅಡಿಯಲ್ಲಿ ವಿಶೇಷ ಪ್ಯಾಕೇಜ್, ಹೈ.ಕ ಭಾಗದಲ್ಲಿ ಉದ್ಯೋಗ ಸೃಷ್ಠಿ ನಿಟ್ಟಿನಲ್ಲಿ ಮಿಲ್ ಬೃಹತ ಕಂಪೆನಿ ಮತ್ತು ಕಾರ್ಖಾನೆಗಳು ಸ್ಥಾಪಿಸಿ, ಉದ್ಯೋಗ ಕಲ್ಪಿಸುವ ಕಾರ್ಯ ನಡೆಸಬೇಕೆಂದು ಅವರು ಒತ್ತಾಯಸಿದರು.

Contact Your\'s Advertisement; 9902492681

ಹೈ.ಕ ಆರೋಗ್ಯ ಚಿಕಿತ್ಸೆ ಕಾಳಜಿ ವಹಸಿ ಸರಕಾರಿ ಆಸ್ಪತ್ರೆಗಳು, ಕೈಗಾರಿಕೆಗೆ ಕ್ಷೇತ್ರದಲ್ಲಿ ಸ್ಥಾನ ಪಡೆಯುವಂತೆ ಶ್ರಮಿಸಲು ಸೇರಿದಂತೆ ಮುಂತಾದ ಜನ ಉಪಯೋಗಿ ಕೆಲಸವನ್ನು ಮಾಡುವ ಮೂಲಕ ಹಿಂದುಳಿದ ಭಾಗದ ಹಣೆ ಪಟ್ಟಿ ತೆಗೆದು ಹಾಕು ನಿಟ್ಟಿನಲ್ಲಿ ಪ್ರಧಾನಿ ಹಾಗೂ ಈ ಭಾಗದ ಸಂಸದರು ಕೆಲಸ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕಾಗಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮನೀಶ ಜಾಜು, ಡಾ. ಮಾಜಿದ್ ದಾಗಿ, ಶಿವಲಿಂಪ್ಪ ಬಂಡೆಕ್, ಎಚ್.ಎಂ ಹಾಜಿ, ಆಸ್ಲಂ ಚಂಗೆ, ಶಿವಕುಮಾರ ಬಿರಾದಾರ ಹಾಗೂ ವಿಶಾಲದೇವ ಧನ್ನೇಕರ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here