ಸುರಪುರ: ಈ ಮುಂಚೆ ರೈತರು ಹಾಗು ಇತರೆ ಯಾವುದೇ ತರಹದ ಸಾಲವನ್ನು ಸ್ಥಳಿಯ ಶಾಖೆಗಳಲ್ಲಿಯೆ ಅರ್ಜಿ ಪಡೆದು ಮಂಜೂರು ಮಾಡಲಾಗುತ್ತಿತ್ತು.ಆದರೆ ಈಗ ಸಾಲಕೆಕ ಅರ್ಜಿ ಪಡೆದು ಯದಗಿರಿಗೆ ಅರ್ಜಿ ಕಳುಹಿಸಿ ಮಂಜೂರು ಪಡೆಯುವ ಪದ್ಧತಿಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಆರೋಪಿಸಿದರು.
ನಗರದ ರಂಗಂಪೇಟೆಯ ಎಸ್‌ಬಿಐ ಶಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,ರೈತರು ಅವಶ್ಯಕತೆಯಿರುವಾಗ ಬಂದು ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ.ಆದರೆ ತಾವು ರೈತರ ಅರ್ಜಿಯನ್ನು ಯಾದಗಿರಿಗೆ ಕಳುಹಿಸಿ ಅನುಮೋದನೆ ಪಡೆಯುವ ಹೊಸ ಪದ್ಧತಿ ಜಾರಿಗೊಳಿಸಿರುವಿರಿ,ಇದರಿಂದ ಅನೇಕ ದಿನಗಳ ಸಮಯ ತಗಲುವುದರಿಂದ ರೈತರಿಗೆ ಅವಶ್ಯವಿರುವಾಗ ಸಾಲ ದೊರೆಯದೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇದರಿಂದ ರೈತರಿಗೆ ಸಾಲ ಅನುಕೂಲವಾಗದೆ ಅನಾನುಕೂಲಕ್ಕೆ ದಾರಿ ಮಾಡಲಿದೆ.ಆದ್ದರಿಂದ ರೈತರ ಮತ್ತಿತರೆ ಯಾರದೇ ಆಗಲಿ ಸಾಲದ ಅರ್ಜಿ ಯಾದಗಿರಿಗೆ ಕಳುಹಿಸಿ ಸಮಯ ವಿಳಂಬ ಮಾಡದೆ ಈ ಮುಂಚೆಯಂತೆ ಇಲ್ಲಿಯೆ ಮಂಜೂರು ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದು ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಬ್ಯಾಂಕ್ ಶಾಖೆಯ ಮುಂದೆ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಬ್ಯಾಂಕ್ ವ್ಯವಸ್ಥಾಪಕ ದಿನಕರಬಾಬು ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರಾದ ಸಿದ್ದಪ್ಪ ಕಮತಗಿ ಹೆಮನೂರ ಚಿನ್ನಪ್ಪ ತಳ್ಳಳ್ಳಿ ಭೀಮಣ್ಣ ನಾಗರಾಳ ಪಕ್ಷದ ತಾಲೂಕು ಅಧ್ಯಕ್ಷ ಹೈಯಳದಪ್ಪ ವನಕೇರಿ ಧನಂಜಯ ಫೀಲ್ಡ್ ಆಫೀಸರ್ ಸೇರಿದಂತೆ ಅನೇಕರಿದ್ದರು.