ಶಹಾಬಾದ:ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಶನಿವಾರ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕೂಲಿ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಕಾರ್ಮಿಕರ ಸಂಘಟನೆಗಳ ವತಿಯಿಂದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ ಮಾತನಾಡಿ, ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಹೊರಟಿದೆ.ಬ್ರಿಟಿಷರಿಂದ ಹೋರಾಟ ಮಾಡಿ ಪಡೆದಂತಹ ಕಾಯ್ದೆಗಳನ್ನು ನಮ್ಮನ್ನು ಆಳುತ್ತಿರುವ ಕೇಂದ್ರ ಸರಕಾರ ಕಳೆಯುತ್ತಿದೆ.ರೈತ ಕಾರ್ಮಿಕರ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ರೈತರನ್ನು, ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ.ಕಾರ್ಮಿಕರ ಹಕ್ಕುಗಳನ್ನು ಕೇಳಿದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕೆಂದು ಎಂದರು.ಬಂಡವಾಳಶಾಹಿ ಪರವಾಗಿ ಮಾಡಿರುವ ಕಾಯ್ದೆ ತಿದ್ದುಪಡಿ, ರೇಲ್ವೆ, ವಿದ್ಯುತ್ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಕಾಯ್ದೆ, ಭೂಸುಧಾರಣಾ ಕಾಯ್ದೆ,ಎಪಿಎಂಸಿ ಕಾಯ್ದೆ, ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ ಮಾತನಾಡಿ, ಹೊನಗುಂಟಾ ಗ್ರಾಪಂಯಲ್ಲಿ 14 ನೇ ಹಣಕಾಸು ಯೋಜನೆಯಲ್ಲಿ ಅಂಗವಿಕಲರಿಗೆ ಯಾವುದೇ ಸೌಲಭ್ಯ ನೀಡಿಲ್ಲ.ಈ ಬಗ್ಗೆ ಅನೇಕ ಬಾರಿ ಪಿಡಿಓ ಹಾಗೂ ತಾಪಂ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ, ಕೈಗೊಳ್ಳುತ್ತಿಲ್ಲ. ಕೂಡಲೇ ಅಂಗವಿಕಲರಿಗೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಅಲ್ಲದೇ ರೈತರಿಗೆ ಪರಿಹಾರ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗದ ರಕ್ಷಣೆ ಒದಗಿಸಬೇಕು. ರೈತರ ಸಾಲಮನ್ನಾ ಮಾಡಬೇಕು. ವೃದ್ಯಾಪ ವೇತನ ಮತ್ತು ಅಂಗವಿಕರ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿದರು.
ಸಿಐಟಿಯು ಚಿತ್ತಾಪೂರ ತಾಲೂಕಾ ಕಾರ್ಯದಶರ್ಿ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಸಂಪತ್ತಕುಮಾರಿ, ಸುನೀತಾ ಕೋರೆ, ಅನ್ನಪೂರ್ಣ, ಶಭಾನಾ ಹಾಗೂ ಕಾಮರ್ಿಕ ಸಂಘಟಕೆಗಳ ಕಾರ್ಯಕರ್ತೆಯರು ಹಾಜರಿದ್ದರು.