ಕಲಬುರಗಿ: ತಾಲೂಕಿನ ಮಾಲಗತ್ತಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಟಾರ ಬೈಕ್ ಹಾಗೂ ಡಿಸೇಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ವಾಡಿ ಪಟ್ಟಣದ ರಮೇಶ ಮರಿಯಪ್ಪ(35) ಮತ್ತು ಗಜೇಂದ್ರ ದೇವೆಂದ್ರಪ್ಪ(32) ಮೃತಪಟ್ಟ ದುರ್ದೈವಿಗಳು. ರಮೇಶ ಮತ್ತು ಗಜೇಂದ್ರ ಇಬ್ಬರು ಬೈಕ್ ಮೂಲಕ ವಾಡಿಯಿಂದ ಕಲಬುರಗಿಗೆ ಹೋಗುವ ಸಂದರ್ಭದಲ್ಲಿ ಮಾಲಗತ್ತಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಟಾರ ಬೈಕ್ಗೆ ಎದುರಿನಿಂದ ಬಂದ ಡಿಸೇಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಮೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಗಜೇಂದ್ರ ಗಂಭೀರ ಗಾಯಗೊಂಡಿದ್ದ ಪರಿಣಾಮ ಅವನ್ನು ಚಿಕಿತ್ಸೆಗಾಗಿ ಅಂಬುಲೆನ್ಸ ಮೂಲಕ ಒಯ್ಯುತ್ತಿರುವಾಗ ಮಾರ್ಗದ ಮಧ್ಯೆಯೇ ಮರಣನಪ್ಪಿದ್ದಾನೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸೇಲ್ ಟ್ಯಾಂಕರ್ ಚಾಲಕ ತಲೆಮರೆಸಿಕೊಂಡಿದ್ದಾನೆ.