ಪಿಎಸ್‍ಐ ಚೇತನ್ ಅವರ ಅಮಾನತ್ತು ರದ್ದುಗೊಳಿಸಲು ಆಗ್ರಹ

0
136

ಸುರಪುರ: ನಗರದ ಪೊಲೀಸ್ ಠಾಣೆಯ ಪಿಎಸ್‍ಐ ಚೇತನ್ ಅವರು ಒಬ್ಬ ದಕ್ಷ ಅಧಿಕಾರಿಗಳಾಗಿದ್ದು ನಗರದಲ್ಲಿನ ಸಂಚಾರಿ ನಿಯಮಗಳ ಪಾಲನೆಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಅಲ್ಲದೆ ನಗರದಲ್ಲಿ ನಡೆಯುತ್ತಿದ್ದ ಇಸ್ಪಿಟ್ ಜೂಜಾಟದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ.ಮತ್ತು ಸಂಚಾರಿ ನಿಯಮ ಪಾಲಿಸದವರಿಗೆ ದಂಡ ವಿಧಿಸಿ ಸರಕಾರಕ್ಕೂ ಆದಾಯ ತಂದಿದ್ದಾರೆ.

ಅಂತಹ ಅಧಿಕಾರಿಯನ್ನು ಅಮಾನತ್ತು ಮಾಡಿರುವುದು ಸರಿಯಲ್ಲ.ಕೂಡಲೆ ಅವರ ಅಮಾನತ್ತು ರದ್ದುಗೊಳಿಸಿ ಪುನಃ ಕೆಲಸಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ ಸದಸ್ಯರಾದ ಲಕ್ಷ್ಮೀ ಎಂ.ಬಿಲ್ಲವ್ ಚನ್ನಮ್ಮ ಎಂ ಮಡಿವಾಳ ಹಾಗು ಸುವರ್ಣ ಎಸ್.ಎಲಿಗಾರ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here