ಪದವಿ ಕಾಲೇಜು ಅಧ್ಯಾಪಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ಆಗ್ರಹ

0
62

ಕಲಬುರಗಿ: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ೪೨೮ ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರ ಬಹು ದಿನಗಳ ಬೇಡಿಕೆಯಾಗಿರುವ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಒತ್ತಾಯಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸರಕಾರಿ ಪದವಿ ಕಾಲೇಜು ಅಧ್ಯಾಪಕರ ವರ್ಗಾವಣೆ ನಡೆದಿರುವುದಿಲ್ಲ. ಇದರಿಂದಾಗಿ ಅಧ್ಯಾಪಕರ ಬೋಧನೆ ಹಾಗು ಆರೋಗ್ಯದ ಮೇಲೆ ಆ ಮೂಲಕ ಒಟ್ಟಾರೆಯಾಗಿ ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿಯೇ ಸಾವಿರಾರು ಅಧ್ಯಾಪಕರು ಕಳೆದ ಹತ್ತು-ಹದಿನೈದು ವರ್ಷಗಳಿಂದ ಒಂದೇ ಕಾಲೇಜಿನಲ್ಲಿ  ಬೀಡು ಬಿಟ್ಟಿರುವ ಪ್ರಯುಕ್ತ  ಅವರಲ್ಲಿ ಅಸಮಾಧಾನ  ಬೆಳೆಯುತ್ತಿದೆ. ಈಗಾಗಲೇ  ಸರಕಾರವು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ-ಉಪನ್ಯಾಸಕರುಗಳ  ವರ್ಗಾವಣೆ ಪ್ರಕ್ರಿಯೆಯು ಜಾರಿಯಲ್ಲಿರುತ್ತದೆ. ಆದರೆ  ಸರಕಾರಿ ಪದವಿ ಕಾಲೇಜು ಅಧ್ಯಾಪಕರ  ವರ್ಗಾವಣೆ ಪ್ರಕ್ರಿಯೆಯನ್ನು ಮಾತ್ರ ಇನ್ನೂ ಪ್ರಾರಂಭಿಸದೇ ಇರುವುದು ಉನ್ನತ ಶಿಕ್ಷಣದ ವಿರೋಧಿಯಾಗಿದೆ ಸಂಘದ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

೨೦೧೩ರ  ವರ್ಗಾವಣಾ ಕೌನ್ಸೆಲಿಂಗ್ ಅಧಿನಿಯಮಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅಧ್ಯಾಪಕರ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸರಕಾರವು ಸಬೂಬು ಹೇಳುವ ಮೂಲಕ ಅಧ್ಯಾಪಕರ ಬಗ್ಗೆ ಸರಕಾರಕ್ಕಿರುವ ಬದ್ಧತೆಯ ಕೊರತೆಯನ್ನು ಸೂಚಿಸುತ್ತದೆ ಎಂದರು.

ಹಳೇ ವರ್ಗಾವಣೆ ಅಧಿನಿಯಮಕ್ಕೆ ಅಗತ್ಯ ತಿದ್ದುಪಡಿ  ತೀವ್ರವಾಗಿ ತರಬೇಕು ಇಲ್ಲವಾದರೆ ಪ್ರಸ್ತೂತದಲ್ಲಿ ಜಾರಿಯಲ್ಲಿರುವ ಹಳೇ ನಿಯಾಮವಳಿಗಳ ಪ್ರಕಾರವೇ ಯಾವುದೆ ವಿಳಂಬವಿಲ್ಲದೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಿ, ಸಂವಿಧಾನದ ೩೭೧(ಜೆ)ನೇ ಕಲಂನ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಧ್ಯಾಪಕರಿಗೆ ಅನುಕೂಲವಾಗಲು ಸ್ಥಳೀಯ ವೃಂದ ರಚಿಸಬೇಕು. ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲೇ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸಬೇಕು.

ಅವೈಜ್ಞಾನಿಕ ವರ್ಗಾವಣಾ ನೀತಿಯಿಂದ ಅನ್ಯಾಯಕ್ಕೊಳಗಾದ ಸರಕಾರಿ ಕಾಲೇಜು ಅಧ್ಯಾಪಕರ ವರ್ಗಾವಣಾ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪ್ರಾರಂಭಿಸಿ ಅಧ್ಯಾಪಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಪದವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ನಿಯೋಗ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಡಾ.ಶ್ರೀಶಕುಮಾರ ಎಚ್.ವಾಯ್. ಅವರ ಮೂಲಕ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಡಾ.ಶ್ರೀಮಂತ ಬಿ.ಹೋಳಕರ, ಡಾ.ಅನೀಲಕುಮಾರ ಹಾಲು, ಡಾ.ಮಾಲ್ಲಿಕಾರ್ಜುನ ಶೆಟ್ಟಿ, ಡಾ.ಚಿನ್ನಾ ಆಶಪ್ಪ,  ಡಾ.ರವಿಂದ್ರಕುಮಾರ ಭಂಡಾರಿ, ಪ್ರೊ.ಲಕ್ಷ್ಮಣ ಯಾದವ,  ಡಾ.ದೇವಿದಾಸ್ ರಾಠೋಡ, ಪ್ರೊ.ಶರಣಪ್ಪ ಗುಂಡಗುರ್ತಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here