ತಳವಾರ, ಪರಿವಾರ ಸಮುದಾಯದಗಳ ಸಮಸ್ಯೆ ಸರಕಾರ ಗಂಭೀರವಾಗಿ ಪರಿಗಣಿಸಿದೆ: ಸಂಸದ ಜಾಧವ

0
438

ಕಲಬುರಗಿ: ಕೂಡಲೇ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಲಾಗುವುದು, ಸೆ. 17ರಂದು  ಈ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ  ಹಮ್ಮಿಕೊಂಡಿರುವ  15ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ತಳವಾರ ಪರಿವಾರ ಸಮುದಾಯಗಳಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಪ್ರಶ್ನೆ ಎತ್ತುವೆ ಎಂದರು.

Contact Your\'s Advertisement; 9902492681

ಕೇಂದ್ರ ಸರ್ಕಾರ ಈಗಾಗಲೇ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಆದರೆ ರಾಜ್ಯದಲ್ಲಿ ಯಾವುದೋ ಗೊಂದಲದಿಂದ ನಿಮಗೆ ಪ್ರಮಾಣ ಪತ್ರ ಸಿಗುತ್ತಿಲ್ಲ.   ಖುದ್ದಾಗಿ ನಾನು ಮುಖ್ಯಮಂತ್ರಿಗಳವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

ಸಪ್ಟಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳವರಿಗೆ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಬರುವೇ ಎಂದು ತಿಳಿಸಿದ ಅವರು, ತಳವಾರ, ಪರಿವಾರ ಸಮುದಾಯಗಳೊಂದಿಗೆ ಕೋಲಿ ಸಮಾಜ ಕೂಡ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರುವುದು ಈ ಸಮಾಜದ ಬಹುದಿನಗಳ ಬೇಡಿಕೆಯಾದೆ. ಈ ಬೇಡಿಕೆಯ ದ್ವನಿಯನ್ನು ನಾನು ಸಂಸತ್ತೀನ ಅಧಿವೇಶನದಲ್ಲಿ ಎತ್ತುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ , ಚಂದ್ರಶೇಖರ ಜಮಾದಾರ ವಕೀಲರು , ಸುನಿತಾ ತಳವಾರ್, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here