ಕಲಬುರಗಿ: ಡಗ್ಸ್ ದಂಧೆ ವಿರುದ್ಧ ಯಾವುದೇ ಒತ್ತಡ ಪ್ರಭಾವಗಳಿಗೆ ಮಣಿಯದೆ ನಿಪ್ಪತಿಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷರಾದ ವಿಶ್ವನಾಥ ಜೆ.ಹುಲಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ನೆಮ್ಮದಿ ಮತ್ತು ಹೆಸರನ್ನು ಕೆಡಿಸಿದ್ದ ಮಾದಕ ವಸ್ತು ಮಾರಾಟ ಜಾಲ ಮತ್ತು ಸೇವನೆಯ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ, ಗೃಹ ಸಚಿವಾಲಯ ಹಾಗೂ ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಾದ ಕ್ರಮ ಜರುಗಿಸುತ್ತಿರುವ ಬಗ್ಗೆ ಸರಕಾರಕ್ಕೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ದಂಧೆ ಮಟ್ಟ ಹಾಕುವಲ್ಲಿ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಬದ್ಧತೆ ನಿಜಕ್ಕೂ ಪ್ರಶಂಸನೀಯ, ಇದೇ ರೀತಿ ತಮ್ಮ ಕಠಿಣ ಕಾರ್ಯ ಮುಂದುವರೆಸಿ ಈ ಮಾಫಿಯಾದಲ್ಲಿ ಭಾಗಿಯಾಗಿರುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಡ್ರಗ್ಸ್ ಅನ್ನು ಶಾಂತಿ ಮತ್ತು ನೆಮ್ಮದಿಗೆ ಹೆಸರಾದ ನಮ್ಮರಾಜ್ಯದಿ೦ದ ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಶ್ರೀಧರ ರಾಜು ಚೌವ್ಹಾಣ, ಮಹೇಶ್ ಎಸ್ ಚೌವ್ಹಾಣ ಸೇರಿದಂತೆ ಇತರರು ಇದ್ದರು.