ತಹಸೀಲ್ದಾರ್ ಖಾತೆಯಿಂದ 75 ಲಕ್ಷ ಹಣ ವಂಚನೆ

0
1535

ಯಾದಗಿರಿ: ನಗರದ ಕಬಾಡಗೇರಾದಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆಯಲ್ಲಿನ ಸುರಪುರ ತಹಸೀಲ್ದಾರ್ ಹೆಸರಲ್ಲಿನ ಖಾತೆಯಲ್ಲಿದ್ದ ಹಣದಲ್ಲಿನ ೭೫ ಲಕ್ಷ ೫೯ ಸಾವಿರ ೯೦೦ ರೂಪಾಯಿಗಳನ್ನು ನಕಲಿ ಸಹಿ ಬಳಸಿ ಹಣ ಎಗರಿಸಿದ ಘಟನೆ ನಡೆದಿದೆ.

ಈ ಕುರಿತು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಹಸೀಲ್ದಾರ್ ಸುರಪುರ ಹೆಸರಲ್ಲಿನ ಎಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ 91901008033954 ಸಂಖ್ಯೆಯ ಖಾತೆಯಿದ್ದು ಈ ಖಾತೆಗೆ ಯಾದಗಿರಿ ಜಿಲ್ಲಾಧಿಕಾರಿಗಳು ನೈಸರ್ಗಿಕ ವಿಕೋಪದಡಿ ಬೇರೆ ಬೇರೆ ದಿನಾಂಕಗಳಂದು ಒಟ್ಟು ೩ ಕೋಟಿ ೫೫ ಲಕ್ಷ ರೂಪಾಯಿಗಳನ್ನು ಖಾತೆಗೆ ಜಮಾ ಮಾಡಲಾಗಿದೆ.ಈ ಹಣವನ್ನು ಕೋವಿಡ್-೧೯ ಸಲುವಾಗಿ ಖರ್ಚು ಮಾಡಲಾಗುತ್ತಿರುತ್ತದೆ.

Contact Your\'s Advertisement; 9902492681

ನನಗೆ ಕೋವಿಡ್ ಪಾಸಿಟಿವ್ ಬಂದ ಕಾರಣದಿಂದ ನಾನು ಕೆಲ ದಿನಗಳಿಂದ ಚಿಕಿತ್ಸೆಗಾಗಿ ಕಲಬುರ್ಗಿ ಮತ್ತಿತರೆ ಹೈದರಾಬಾದ್‌ನ ಆಸ್ಪತ್ರೆಗಳಿಗೆ ಹೋಗಿ ಬಂದಿದ್ದು,ಈಗ ಕರ್ತವ್ಯದಲ್ಲಿದ್ದೆನೆ.ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಂದು ಮತ್ತೆ ಹಣದ ಅವಶ್ಯಕತೆಯಿದ್ದಲ್ಲಿ ಪತ್ರದ ಮುಖೆನ ತಿಳಿಸುವಂತೆ ಹೇಳಲಾಗಿದ್ದರಿಂದ ಎಕ್ಸಿಸ್ ಬ್ಯಾಂಕ್ ಖಾತೆಯಲ್ಲಿನ ಹಣ ಖರ್ಚಾದುದರ ಕುರಿತು ಪರಿಶೀಲನೆ ನಡೆಸಿದಾಗ ನನ್ನ ಖಾತೆಯಿಂದ ಸುಮಾರು ೭೫ ಲಕ್ಷ ೫೯ ಸಾವಿರ ೯೦೦ ರೂಪಾಯಿ ಹಣ ವ್ಯತ್ಯಾಸ ಕಂಡುಬಂದಿದ್ದರಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ,ಬ್ಯಾಂಕ್ ಸಿಬ್ಬಂದಿ ನನ್ನ ಹೆಸರಿನ ಚೆಕ್ ನೀಡಿ ಅದರ ಮೇಲೆ ನಕಲಿ ಸಹಿ ಮಾಡಿ ಮಹಾಲಕ್ಷ್ಮೀ ಎಂಟರ್ ಪ್ರೈಸಸ್ ಎಂಬ ಹೆಸರಿನ ಜಿಎಸ್‌ಟಿ ಸಂಖ್ಯೆಯುಳ್ಳವರು ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಸಾ: ವಜ್ಜಲ್ ಗ್ರಾಮದವರು ಹಣ ಸಂದಾಯ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಪಿಐ ಎಸ್.ಎಮ್.ಪಾಟೀಲ್ ಅವರು ಕಾರ್ಯಾಚರಣೆ ಆರಂಭಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡುವಲ್ಲಿ ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸದೆ ಸಂದಾಯ ಮಾಡಿರುವುದರಿಂದ ಎಕ್ಸಿಸ್ ಬ್ಯಾಂಕ್ ಸಿಬ್ಬಂದಿ ಬಗ್ಗೆ ಅಥವಾ ಚೆಕ್ ಹೇಗೆ ಲಕ್ಷ್ಮೀ ಎಂಟರ್ ಪ್ರೈಸಸ್ ಮಾಲೀಕರ ಕೈಗೆ ಹೋಯಿತು,ಅದರ ಮೇಲೆ ಮೊಹರು ಹೇಗೆ ಬಂತು ಎಂದು ಯೋಚಿಸುವಲ್ಲಿ ತಹಸೀಲ್ ಕಚೇರಿಯ ಸಿಬ್ಬಂದಿಯೂ ಇದರಲ್ಲಿ ಶಾಮಿಲಾಗಿರಬಹುದೆಂದು ಅನುಮಾನ ವ್ಯಕ್ತವಾಗುತ್ತಿದ್ದು ಈ ವಂಚನೆಯ ಹಿಂದೆ ಯಾರಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here