ಕಲಬುರಗಿ: ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಹಾವು ಕಚ್ಚಿ 7ವರ್ಷದ ಬಾಲಕ ಮೃತಪಟ್ಟ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಡೊಂಗರಗಾವ ಧನಶೆಟ್ಟಿ ಸುಭಾಶ್ಚಂದ್ರ ವಡ್ಡನಕೇರಿ (7) ಮೃತಪಟ್ಟ ಬಾಲಕ. ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಹಾವು ಕಚ್ಚಿ ಮೃತ ಪಟ್ಟಿರುವುದಾಗಿ ತಿಳಿದುಬಂದೆ.
ಈ ಕುರಿತು ಕಮಲಾಪುರ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಘೋಷಿಸಬೆಂಕು ಮುಖಂಡರಾದ ಶರಣಗೌಡ ಪಾಳಾ ಆಗ್ರಹಿಸಿದ್ದಾರೆ.