ಪುರಸಭೆ ಕಾರ್ಯವೈಖರಿಗೆ ಜನ ಆಕ್ರೋಶ: ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತ

0
65

ಜೇವರ್ಗಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮದಿಂದಾಗಿ ಪಟ್ಟಣದ ಮುಖ್ಯರಸ್ತೆಯ ಸೇರಿದಂತೆ ಹಲವಾರು ಬಡಾವಣೆಗಳಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳು ಹಾಳಾಗಿ ಹೋಗಿತ್ತು ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ಬಿಜಾಪುರ ಕ್ರಾಸ್ ನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಕೃಷಿ ಉಪ ಮಾರುಕಟ್ಟೆಯ ಸಂಖ್ಯೆ ಹಣದಿಂದ ನೀರು ಹರಿದ ಪರಿಣಾಮವಾಗಿ ರಾಜ್ಯ ರಾಜ್ಯ ಹೆದ್ದಾರಿಯು ಹೊಡೆದು ಹೋಗಿ ಸುಮಾರು 34 ಸೀಟುಗಳ ನಿರ್ಮಾಣವಾಗಿವೆ ಅಧಿಕಾರಿಗಳಾಗಲಿ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ತಲೆಕೆಡಿಸಿಕೊಂಡಿಲ್ಲ.

Contact Your\'s Advertisement; 9902492681

ಚರಂಡಿ ಹಾಗೂ ಮಳೆನೀರಿನ ಸಾಗಾಟದ ವ್ಯವಸ್ಥೆಯಿಲ್ಲ:
ಇಲ್ಲಿನ 23 ವಾರ್ಡುಗಳನ್ನು ಸಹ ಮಳೆನೀರಿನ ಹಾಗೂ ಚರಂಡಿ ನೀರಿನ ಸಾಗಾಟದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಜನರ ಮನೆಗಳ ಸುತ್ತಮುತ್ತ ಹಾಗೂ ಮುಖ್ಯ ರಸ್ತೆಯ ಮೇಲೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ.

ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಲ್ಲಿ ನಿರ್ಮಿಸಲಾದ ರಸ್ತೆಗಳು ಹಾಗೂ ಚರಂಡಿಗಳು ಸಂಪೂರ್ಣವಾಗಿ ಹಾಳಾಗಿದ್ದು ಮಳೆನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿವೆ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಸೊಳ್ಳೆ ಹಾಗೂ ಹಾನಿಕಾರಕ ಕ್ರಿಮಿಕೀಟಗಳ ತಾಣವಾಗಿ ಪರಿಣಮಿಸುತ್ತಿವೆ.

ಸರಿಯಾದ ಒಳಚರಂಡಿ ಹಾಗೂ ಶೌಚಾಲಯದ ಸಂಪರ್ಕ ವ್ಯವಸ್ಥೆ ಇಲ್ಲದೆ ಶೌಚಾಲಯದ ಕೊಳಕು ನೀರು ಹಾಗೂ ಮಲಮೂತ್ರಗಳು ಇಲ್ಲಿನ ಬುಟನ್ನಾಳ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಹರಿಯುತ್ತಿದ್ದು ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಜೀವರ್ಗಿ ಪಟ್ಟಣದ ಅಭಿವೃದ್ಧಿಗೆ ಇಲ್ಲಿನ ಶಾಸಕರು ಗಮನ ಹರಿಸಿದಂತೆ ಕಾಣುತ್ತಿಲ್ಲ ಹಾಗೂ ಸರಿಯಾದ ರಸ್ತೆ ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ .ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇನ್ನಾದರೂ ಜೇವರ್ಗಿ ಶಾಸಕರು ಹಾಗೂ ಪುರಸಭೆ ಅಧಿಕಾರಿಗಳು ಸೇರಿದಂತೆ ಲೋಕೋಪಯೋಗಿ ಇಲಾಖೆಯ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಜೇವರ್ಗಿ ಯನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡುತ್ತಾರೆ ?ಎಂದು ಜನ ನಿರೀಕ್ಷೆಯಲ್ಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here