ಅಂತ್ಯಸಂಸ್ಕಾರಕ್ಕೆ ಪೊಲೀಸರಿಂದ ಅಡ್ಡಿ: ಗ್ರಾಮಸ್ಥರು, ಸಿಬ್ಬಂದಿಗಳ ನಡುವೆ ವಾಗ್ವಾದ

0
40

ಕಲಬುರಗಿ: ನಂದಿಕೂರ ಗ್ರಾಮದ ವ್ಯಕ್ತಿ ಓರ್ವನ ಶವ ಸಂಸ್ಕಾರಕ್ಕೆ ಇಲ್ಲಿನ ಕೇಂದ್ರ ಕಾರಾಗೃಹದ ಪೊಲೀಸ್ ರು ಅಡ್ಡ ಅಡ್ಡಿಪಡಿಸಿರುವುದರಿಂದ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿರುವ ಘಟನೆ ಜರುಗಿದೆ‌.

ಗ್ರಾಮದ ಶರಣಯ್ಯ ಸ್ವಾಮಿ ಎಂಬುವರು ಮೃತಪಟ್ಟಿದ್ದ, ಹಿನ್ನೆಲೆಯಲ್ಲಿ ಎದುರಿನ ಜಮೀನಿನಲ್ಲಿ ಶವ ಸಂಸ್ಕಾರಕ್ಕೆ ಹೂಳಲೆಂದು ತಗ್ಗು ತೋಡುವಾಗ ಈ ವಾಗ್ವಾದ ಸಂಭವಿಸಿದೆ.

Contact Your\'s Advertisement; 9902492681

ಪಹಣಿಯಲ್ಲಿ ಕೇಂದ್ರ ಕಾರಾಗೃಹ ಎಂದಿರೋದ್ರಿಂದ ಜಮೀನು ತಮಗೆ ಸೇರಿದ್ದೆಂದು ಜೈಲು ಸಿಬ್ಬಂದಿ ವಾದ ಮಾಡಿದ್ದಾರೆ. ಆದರೆ, 13 ಎಕರೆ ತಮಗೆ ಸೇರಿದ ಹೊಲವೆಂದು ಮೃತನ ಸಂಬಂಧಿಗಳು ವಾದಮಾಡಿ ಹೊಲದಲ್ಲಿಯೇ ಅಂತ್ಯಕ್ರಿಯೆ ನಡೆಸಿರುವುದಾಗಿ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ.

ನಂದಿಕೂರು ಗ್ರಾಮದಲ್ಲಿ 17 ವರ್ಷಗಳಿಂದ ಸ್ಮಶಾನ ಭೂಮಿ ಇಲ್ಲದಿರುವುದರಿಂದ. ಸ್ವಂತ ಹೊಲದಲ್ಲಿ ಶವ ಹೂಳುತ್ತೇವೆ ಎಂದು ವಾದ ನಡೆಸಿದಾಗ ಅಧಿಕಾರಿಗಳು ಮತ್ತು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ತಹಶೀಲ್ದಾರ್​ ಮಲ್ಲೇಶಿ ತಂಗಾ  ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿದರು.

ವಾಗ್ವಾದ‌ಕೊನೆಗೆ ಗ್ರಾಮದ ಮುಖಂಡರಾದ ಮಲ್ಲನಗೌಡ ಪಾಟೀಲ ತಮ್ಮ ಜಮೀನಿನಲ್ಲಿ ಶವ ಹೂಳಲು ಅವಕಾಶ ನೀಡುವುದಾಗಿ ಹೇಳಿದ್ದರಿಂದ ವಿವಾದಕ್ಕೆ ತಾತ್ಕಾಲಿಕ ತೆರೆ ಬಿತ್ತು ಎಂದು ತಿಳಿದುಬಂದಿದೆ.

ಆದರೆ, ಒಂದು ತಿಂಗಳೊಳಗಾಗಿ ರುದ್ರಭೂಮಿಗೆ ಜಾಗ ಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here