ಕಲಬುರಗಿ: ಜಿಲ್ಲೆಯಾದ್ಯಂತ ಇಂದು ಸಂಜೆ ಧರೆಗಳಿದ ವರುಣನ ಆರ್ಭಟದಿಂದಾಗಿ ಗುಡುಗು, ಸಿಡಿಲಿನ ಮಳೆ ಬಂದಿತು.
ಬಹಳ ದಿನಗಳ ನಂತರ ಬಿದ್ದ ಭಾರೀ ಮಳೆಯಿಂದಾಗಿ ಇಳೆಯೇನೋ ತಂಪಾಯಿತು. ಆದರೆ ಚಿತ್ತಾಪುರ ತಾಲ್ಲೂಕಿನ ಮಾಡಬೂಳ ವ್ಯಾಪ್ತಿಯಲ್ಲಿ ಮೂವರು, ಆಳಂದನಲ್ಲಿ ಇಬ್ಬರು ಸಿಡಿಲಾಘಾತಕ್ಕೆ ಬಲಿಯಾದ ಬಗ್ಗೆ ವರದಿಯಾಗಿದೆ.
ಅದೇರೀತಿಯಾಗಿ ಚಿಂಚೋಳಿ ತಾಲೂಕಿನ ಸುಲೇಪೇಟನ ಕುಡ್ಡಳ್ಳಿಯಲ್ಲಿ 14 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಮಾಡಬೂಳ ವ್ಯಾಪ್ತಿಯಲ್ಲಿ ಗಾಮು ರಾಠೋಡ್ (32), ಸುರೇಶ (30), ಯುವರಾಜ (24) ಸಾವನ್ನಪ್ಪಿದ್ದಾರೆ.
ಆಳಂದನಲ್ಲಿ ಅಬ್ದುಲ್ ಗನಿ (17), ಸೂರ್ಯಕಾಂತ (17) ಸಾವನ್ನಪ್ಪಿದ್ದಾರೆ.
ಸುಲೇಪೇಟ ಸಮೀಪದ ಕುಡ್ಡಳ್ಳಿಯಲ್ಲಿ ಶರಣಪ್ಪ ಎಂಬುವವರಿಗೆ ಸೇರಿದ 13 ಕುರಿ ಹಾಗೂ ಇನ್ನೊಬ್ಬರಿಗೆ ಸೇರಿದ 1 ಕುರಿ ಸಾವನ್ನಪ್ಪಿದ ಘಟನೆ ಜರುಗಿದೆ.
ಮಾಡಬೂಳ ಬಳಿ ಸಂಭವಿಸಿದ ದುರ್ಘಟನಾ ಸ್ಥಳಕ್ಕೆ ಸಂಸದ ಡಾ. ಉಮೇಶ್ ಜಾಧವ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಂದು ವಾರದಲ್ಲಿ 6 ಜನ ಸಿಡಿಲಿಗೆ ಮೃತಪಟ್ಟಂತಾಗಿದೆ.