ಕಲಬುರಗಿ: ಅತಿವೃಷ್ಟಿಯಿಂದ ಆಳಂದ ತಾಲೂಕಿನಲ್ಲಿ ಸುಮಾರು 32ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದೆ ಆದ್ದರಿಂದ ಈ ಕೂಡಲೇ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲು ಕ್ರಮ ವಹಿಸಬೇಕೆಂದು ಕೃಷಿ ಸಚಿವ ಬಿ ಸಿ ಪಾಟೀಲರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಮನವಿ ಮಾಡಿದ್ದಾರೆ.
ಈ ಕುರಿತು ಕೃಷಿ ಸಚಿವರಿಗೆ ಪತ್ರ ಬರೆದಿರುವ ಅವರು, ಬೆಳೆ ಹಾನಿಯಾದ ತಾಲೂಕಿನ ರೈತರು ‘ಪ್ರಧಾನಮಂತ್ರಿ ಫಸಲ ಭೀಮಾ’ ಯೋಜನೆ ಅಡಿಯಲ್ಲಿ ಹೆಸರು ನೊಂದಾಯಿಸಿಕೊಂಡಿರುತ್ತಾರೆ. ನೊಂದಾಯಿತ ರೈತರಿಗೆ ಇಲ್ಲಿಯವರೆಗೂ ಅಧಿಕಾರಿಗಳು, ವಿಮಾ ಕಂಪನಿ ಸಿಬ್ಬಂದಿಗಳು ಭೇಟಿ ಮಾಡದಿರುವುದು ವಿಷಾದನಿಯ ಸಂಗತಿಯಾಗಿದೆ ಎಂದು ವಿವರಿಸಿದ್ದಾರೆ.
ಸಂಕಷ್ಟದಲ್ಲಿರುವ ಅನ್ನದಾತನ ನೆರವಿಗೆ ಧಾವಿಸಿ ‘ಪ್ರಧಾನಮಂತ್ರಿ ಫಸಲ ಭೀಮಾ’ ಯೋಜನೆ ಅಡಿಯಲಿ ಹೆಸರು ನೊಂದಾಯಿಸಿಕೊಂಡಿರುವ ರೈತರಿಗೆ ಮತ್ತು ಕಾರಣಾಂತರಗಳಿಂದ ನೊಂದಾಯಿಸಿಕೊಳ್ಳದ ರೈತರ ಕೃಷಿ ಪ್ರದೇಶಗಳ ಬೆಳೆ ಹಾನಿ ಸರ್ವೇಯನ್ನು ನಡೆಸಲು ಸಂಬಂಧಿತರಿಗೆ ನಿರ್ದೇಶನ ನೀಡಿ ಗರಿಷ್ಟ ಪ್ರಮಾಣದಲ್ಲಿ ಪರಿಹಾರ ನೀಡಲು ವಿಮಾ ಕಂಪನಿಗೆ ಸೂಚನೆ ನೀಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.
Soyabena loss
Full loss soya 6akar