ಸುರಪುರದ ವಣಕಿಹಾಳದಲ್ಲಿ ಮಳೆ ಅವಾಂತರ: ರಾತ್ರಿಯಿಡೀ ನೀರಲ್ಲೆ ಕುಳಿತ ಜನತೆ

0
57

ಸುರಪುರ: ನಗರದ ವಾರ್ಡ ಸಂಖ್ಯೆ ೩೧ರ ಸತ್ಯಂಪೇಟೆಯ ವಣಕಿಹಾಳದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೂರಕ್ಕು ಹೆಚ್ಚು ಮನೆಗಳು ಜಲಾವೃತಗೊಂಡಿವೆ.ಪ್ರತಿ ಬಾರಿ ಮಳೆ ಬಂದಾಗಲು ಇಲ್ಲಿಯ ಜನರಿಗೆ ಸಂಕಷ್ಟ ಎದುರಾಗುತ್ತಿದ್ದು ಸ್ಥಳಿಯ ನಗರಸಭೆ ಇದರ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುತ್ತಿಲ್ಲ ಎಂದು ವಣಿಕಿಹಾಳ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶನಿವಾರ ರಾತ್ರಿ ಮಳೆ ಸುರಿಯುತ್ತಿದ್ದಂತೆ ಏಕಾಎಕಿ ನೀರು ನುಗ್ಗಲಾರಂಭಿಸಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ.ಅಲ್ಲದೆ ಮನೆಯಲ್ಲಿನ ಎಲ್ಲಾ ವಸ್ತುಗಳು ನೀರಲ್ಲಿ ನೆನೆಯುತ್ತಿದ್ದಂತೆ ವಣಕಿಹಾಳದ ಜನರು ಕಣ್ಣಿರು ಹರಿಸುವಂತಾಗಿದೆ.ಮನೆಗಳಲ್ಲಿ ನೀರು ತುಂಬಿದ್ದರಿಂದ ಇಡೀ ರಾತ್ರಿ ಜನರು ನಿದ್ದೆ ಮಾಡದೆ ಎದ್ದು ನಿಂತುಕೊಂಡಿದ್ದಾರೆ.ಅಲ್ಲದೆ ಮಳೆಯ ನೀರಲ್ಲಿ ಹರಿದು ಬರುವ ಹಾವು ಚೇಳುಗಳ ಭಯ ಹಾಗು ಚಿಕ್ಕ ಚಿಕ್ಕ ಮಕ್ಕಳು ಮನೆಯಲ್ಲಿರುವುದರಿಂದ ಅವುಗಳಿಗೆ ಅಪಾಯವಾಗುವ ಭಯದಿಂದ ಜನರು ಹೈರಾಣಾಗಿದ್ದಾರೆ.ಅಲ್ಲದೆ ವಣಕಿಹಾಳದಲ್ಲಿನ ಸರಕಾರಿ ಶಾಲೆಯು ಕೂಡ ಸಂಪೂರ್ಣ ಜಲಾವೃತಗೊಂಡಿದ್ದು ಶಾಲಾ ಆವರಣವು ಕೆರೆಯಂತಾಗಿದೆ.

Contact Your\'s Advertisement; 9902492681

ಇದೆಲ್ಲದರ ಕುರಿತು ಸ್ಥಳಿಯ ಮುಖಂಡ ದುರ್ಗಪ್ಪ ವಣಕಿಹಾಳ ಮಾತನಾಡಿ,ನಮಗೆ ಮಳೆಗಾಲ ಬಂದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಕಾಲ ಮಾಡಬೇಕಿದೆ,ನಗರಸಭೆಗೆ ಅನೇಕ ಬಾರಿ ಹೇಳಿದರು ಯಾವುದೇ ಪರಿಹಾರ ಕಲ್ಪಿಸಿಲ್ಲ.ಅಲ್ಲದೆ ಶಾಸಕ ರಾಜುಗೌಡ ಅವರು ಕೂಡ ಕೆಲ ದಿನಗಳ ಹಿಂದೆ ಬಂದು ನೋಡಿಕೊಂಡು ಹೋಗಿದ್ದಾರೆ ಆದರೆ ಯಾವುದೇ ಪರಿಹಾರದ ಕ್ರಮವಾಗಿಲ್ಲ.ಮನೆಯಲ್ಲಿನ ಎಲ್ಲಾ ವಸ್ತುಗಳು ನೀರಲ್ಲಿ ನಿಂತಿವೆ ಮುಂಜಾನೆಯಿಂದ ಊಟವಿಲ್ಲ ಕುಡಿಯಲು ನೀರು ಇಲ್ಲ,ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ವಣಿಕಿಹಾಳದ ಎಲ್ಲಾ ಕುಟುಂಬಗಳಿಗೆ ಕೂಡಲೆ ಅಗತ್ಯ ಮೂಲಭೂತ ವಸ್ತುಗಳು ನೀಡಬೇಕು ಮತ್ತು ಸೂಕ್ತ ಪರಿಹಾರ ನೀಡಿ ಎಲ್ಲರಿಗು ಮನೆಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here