ಕಲಬುರಗಿ: ಬಾರೆ ಹಿಲ್ ರಿಂಗ್ ರಸ್ತೆಯ ಎಒಎಸ್ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಸಹಾಯ ಕೇಂದ್ರವನ್ನು ಡಾ. ಸಂಗಮೇಶ ಎಸ್.ಹಿರೇಮಠ್ ಉದ್ಘಾಟಿಸಿದರು.
ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಎಂಬ ಧ್ಯೇಯ ವಾಕ್ಯದೊಂದಿಗೆ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಆರಂಭಿಸಿದ್ದು ಎಲ್ಲರೂ ಸದುಪಯೋಗ ಪಡೆಯಬೇಕೆಂದು ಡಾ. ಸಂಗಮೇಶ ಎಸ್. ಹಿರೇಮಠ ಹೇಳಿದರು.
ಬಾರೆ ಹಿಲ್ ರಿಂಗ್ ರಸ್ತೆಯ ಎಒಎಸ್ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಕಲಿಕಾರ್ಥಿ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಜಿಇಆರ್ ಅತ್ಯಂತ ಕೆಳಸ್ತರದಲ್ಲಿದೆ. ಕಲಬುರ್ಗಿ ಜಿಇಆರ್ ಕೇವಲ ಶೇ.೧೪ ವಿಷಾದನೀಯ. ಸಾಚಾರ ಸಮಿತಿ ವರದಿ ಆಧಾರದ ಮೇಲೆ ನಾವು ಸಾಗಬೇಕಾದ ದಾರಿ ತುಂಬಾ ದೂರವಿದೆ ಎಂದು ಹೇಳಿದರು.
ನಿವೃತ್ತಿ ಪ್ರಾಚಾರ್ಯರಾದ ಡಾ. ರಾಬಿಯಾ ಖಾನ೦ ಮಾತನಾಡಿ ಎಒಎಸ್ ಪದವಿ ಕಾಲೇಜಿನಲ್ಲಿ ಪಿಜಿ ಕೋರ್ಸ್ ಪ್ರಾರಂಭಿಸಲು ಅರ್ಹರಾಗಿದಾರೆ ಎಂದರು.
ಈ ಸಂದರ್ಭದಲ್ಲಿ ಅಯ್ಯೂಬ್ ಖಾನ್ ಇತರರಿದ್ದರು.