ಕೋಲಾರ: ಜಿಲ್ಲೆಯಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋಲಾರ ಜಿಲ್ಲೆಯ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಶೋಬಿತಾ ರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಯ ಸಂಸ್ಥಾಪಕರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆ ರಾಜ್ಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ನೌಕರರ ಗುತ್ತಿಗೆ ಪದ್ದತಿ ಎಂಬ ಜೀವ ಪದ್ದತಿಯನ್ನು ಕೈ ಬಿಡಬೇಕು. ಮನವ ಸಂಪನ್ಮೂಲ ನೀತಿಯನ್ನು ಜಾರಿಗೆ ತರಬೇಕು. ಆಪತ್ತು ಪ್ರೋತ್ಸಾಹ ಧನ ಎಲ್ಲರಿಗೂ ನೀಡಬೇಕು. ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಕಾಯಂ ಮಾಡಬೇಕು. ” ಏಪ್ರಿಲ್ ಬಂದು ದಿನ ವಿರಾಮ ಮತ್ತು ಬಾಂಡ್ ಪದ್ದತಿ ಕೈಬಿಡಬೇಕು ” ಕಾರ್ಮಿಕರಿಗೆ ಮತ್ತು ನೌಕರರಿಗೆ ಸೇವಾ ಭದ್ರತೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಗುತ್ತಿಗೆ ಬರುವಂತಹ ನೌಕರರು ಮತ್ತು ಕಾರ್ಮಿಕರಿಗೆ ಹತ್ತು ತಿಂಗಳ ನಂತರ ಕಾಯಂ ಮಾಡಬೇಕು. ಭರವಸೆಗಳನ್ನು ಕೊಡುವುದು ಬಿಟ್ಟು ಬೇಡಿಕೆಗಳು ಅತೀ ಶೀಘ್ರದಲ್ಲೇ ಜಾರಿಯಾಗಬೇಕು.
ಈ ಮನವಿ ಪತ್ರವನ್ನು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಕೋಲಾರ ಜಿಲ್ಲಾ ಸಹಾಯಕ ಕಮಿಷನರ್ ರವರ ಮುಖಾಂತರ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ರವರಿಗೆ ಮತ್ತು ಕಾರ್ಮಿಕ ಮಂತ್ರಿಗಳಾದ ಶಿವರಾಮ್ ಹೆಬ್ಬಾರ್ ರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಯ ಸಂಸ್ಥಾಪಕ ಮತ್ತು ರಾಜ್ಯ ಅಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಮನವಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಯ ಕೋಲಾರ ಜಿಲ್ಲಾಧ್ಯಕ್ಷರಾದ ಎನ್ ರಂಜಿತ್ ಕುಮಾರ್, ರಾಜ್ಯ ರೈತ ಘಟಕದ ಕಾರ್ಯದರ್ಶಿ ಭಾರ್ಗವ, ಕೋಳಿ ಸಾಕಣೆಯ ರಾಜ್ಯಾಧ್ಯಕ್ಷರಾದ ಎಸ್ ರಘು, ಕೋಲಾರ ತಾಲೂಕು ಅಧ್ಯಕ್ಷರಾದ ಅಯ್ಯಣ್ಣ ಗೌಡ, ಪತ್ರಿಕಾ ಮಾದ್ಯಮದವರಾದ ಅವಿನಾಶ್, ಶಿಕ್ಷಕರ ಘಟಕದ ಜಿಲ್ಲಾಧ್ಯಕ್ಷರಾದ ಎಸ್ ಎನ್ ಶಂಕರ್, ಕೋಲಾರ ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಮಂಜುಳಾ ನಾಗರಾಜ್, ಮುಳಬಾಗಿಲು ತಾಲೂಕಿನ ಮಹಿಳಾ ಘಟಕದ ಅಧ್ಯಕ್ಷರಾದ ಎಂ, ಎಚ್ ಸುಜಾತಾ, ರಾಜ್ಯ ಸದಸ್ಯರಾದ ಆಲ್ಬರ್ಟ್, ವೈದ್ಯಾಧಿಕಾರಿಗಳಾದ ಘಟಕದ ಅಧ್ಯಕ್ಷರಾದ ಶ್ರೀನಿವಾಸ್, ಮನೋಜ್, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪಡೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.